ಜಿಲ್ಲೆ

ಹಿರಿಯ ನಟಿ ಲೀಲಾವತಿ ಚಿಕಿತ್ಸೆಯ ಖರ್ಚು ವೆಚ್ಚವನ್ನು ಸರ್ಕಾರವೇ ಭರಿಸಲಿದೆ; ಸಿಎಂ ಸಿದ್ದರಾಮಯ್ಯ ಹೇಳಿಕೆ

ಹಿರಿಯ ನಟಿ ಲೀಲಾವತಿ ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ತಮ್ಮ ತೊಟದ ಮನೆಯಲ್ಲಿ ತಮ್ಮ ಮಗ ವಿನೋದ್ ರಾಜ್ ಆರೈಕೆ ಮಾಡುತ್ತಿದ್ದಾರೆ. ‘
ಕಳೆದೆರಡು ದಿನಗಳ ಹಿಂದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಲೀಲಾವತಿಯವರ ನೀವಾಸಕ್ದಕೆ ಭೇಟಿ ನೀಡಿದ್ದರು. ಜೊತೆಗೆ ಮೊನ್ನೆ ಮೊನ್ನೆ ದರ್ಶನ್ ತೂಗುದೀಪ, ಬಹುಭಾಷಾ ನಟ ಅರ್ಜುನ್ ಸರ್ಜಾ, ಅಭಿಷೇಕ್ ಅಂಬರೀಶ್ ಸಹ ಹಿರಿಯ ನಟಿಯ ಆರೋಗ್ಯ ವಿಚಾರಿಸಿದ್ದರು.


ಶಿವರಾಜ್ ಕುಮಾರ್ ಭೇಟಿಯಾಗಿ ಬಂದ ಎರಡು ದಿನಗಳ ಬಳಿಕ ಡಿಸೆಂಬರ್ 3 ಭಾನುವಾರದಂದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ನೆಲಮಂಗಲದ ಸೋಲದೇವನಹಳ್ಳಿಯಲ್ಲಿರುವ ಲೀಲಾವತಿಯವರ ತೋಟದ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುವಿದರ ಜೊತೆಗೆ "ಲೀಲಾವತಿ ಅವರಿಗೆ ಚಿಕಿತ್ಸೆಯ ಅಗತ್ಯ ಕಂಡುಬಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದರೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ" ಎಂದು ಭರವಸೆ ನೀಡಿದ್ದಾರೆ.


ರಾಜ್ಯದ ಸಿಎಂ ಸಿದ್ದರಾಮಯಯ್ಯ ಲೀಲಾವತೊಯವರ ಯೋಗ ಕ್ಷೇಮವನ್ನ ವಿಚಾರಿಸಿದ್ದಾರೆ. ಮುಖ್ಯಮಂತ್ರಿಗಳ ಅಧಿಕೃತ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಮಗ ವಿನೋದ್ ರಾಜ್ ಕೂಡ ತಾಯಿಯನ್ನು ಕಾಳಜಿಯಿಂದ ಆರೈಕೆ ಮಾಡುತ್ತಿದ್ದಾರೆ. ಸರ್ಕಾರದಿಂದ ಏನೇ ಸಹಾಯದ ಅಗತ್ಯವಿದ್ದರು ಅದನ್ನು ಒದಗಿಸಲಾಗುವುದು" ಎಂದು ಭರವಸೆ ನೀಡಿದ್ದಾರೆ. ಹಾಗೆಯೇ "ಲೀಲಾವತಿಯವರು ಆರೋಗ್ಯವಂತರಾಗಿದ್ದಾಗ ಜಮೀನು ವಿಚಾರವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಭೇಟಿಯಾಗುತ್ತಿದ್ದರು. ಈಗ ವಯೋಸಹಜವಾಗಿ ಕಾಯಿಲೆಗಳಿಂದ ಹಾಸಿಗೆ ಹಿಡಿದಿದ್ದಾರೆ. ಅವರು ಒಬ್ಬ ನೈಜ ಪ್ರತಿಭೆಯ ಕಲಾವಿದೆ" ಎಂದು ಲೀಲಾವತಿ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ.


ಡಾ. ಶಿವರಾಜ್‌ಕುಮಾರ್‌ ಲೀಲಾವತಿ ಹಾಗೂ ವಿನೋದ್ ರಾಜ್ ಭೇಟಿ ಮಾಡಿದ ಬಳಿಕ, ಮಾಧ್ಯಮಗಳ ಜೊತೆ ಮಾತನಾಡಿ, "ಈ ವಯಸ್ಸಿನಲ್ಲಿ ಇದನ್ನೆಲ್ಲಾ ತಡೆದುಕೊಳ್ಳುವ ಶಕ್ತಿ ಯಾರಿಗೂ ಇರಲ್ಲ. ಯೋಗಪುರುಷರು ಅಂತಾರೆ. ಅದಕ್ಕೆ ಲೀಲಾವತಿಯವರು ಅಷ್ಟು ಶಕ್ತಿಯಿಂದ ತಡೆದುಕೊಂಡಿದ್ದಾರೆ. ಆಗಿನ ಕಾಲದವರು ಬಹಳ ಸ್ಟ್ರಾಂಗ್ ಆಗಿ ಇರ್ತಾರೆ ಎಂದಿದ್ದರು.