ಜಿಲ್ಲೆ

ರಾಜ್ಯ ಬಜೆಟ್ 2020: ಭಾಷಣ ಆರಂಭವಾಗುತ್ತಿದ್ದಂತೆ ಬಜೆಟ್ ಪ್ರತಿ ಆಗ್ರಹಿಸಿ ಪಟ್ಟು ಹಿಡಿದ ಕಾಂಗ್ರೆಸ್ ಸದಸ್ಯರು

vijayavani

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ಮುಂಗಡಪತ್ರ ಮಂಡನೆ ಆರಂಭಿಸಿದ ಬೆನ್ನಲ್ಲೇ, ಬಜೆಟ್​ನ ಮುದ್ರಿತ ಪ್ರತಿ ಹಂಚಿಕೆ ಮಾಡುವಂತೆ ವಿಪಕ್ಷ ಸದಸ್ಯರು ಪಟ್ಟು ಹಿಡಿದರು.

ಇದರ ನಡುವೆಯೇ ಬಜೆಟ್ ಭಾಷಣ ಮುಂದುವರಿಸಿದ ಸಿಎಂ ಯಡಿಯೂರಪ್ಪ ಅವರ ಗಮನಸೆಳೆದ ಪ್ರತಿಪಕ್ಷ ಸದಸ್ಯರು, ಮುಂಗಡಪತ್ರದ ಮುದ್ರಿತ ಪ್ರತಿ ಹಂಚಿಕೆ ಮಾಡಬೇಕು ಎಂದು ಪಟ್ಟು ಹಿಡಿದರು. ಇದೇ ವೇಳೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರತಿಕ್ರಿಯಿಸಿ, ಸಿಎಂ ಮುಂಗಡ ಪತ್ರದ ಪ್ರತಿ ಹಂಚುವಂತೆ ಹೇಳಿದ್ದಾರೆ. ಹಂಚುತ್ತೇವೆ. ಭಾಷಣ ಮುಂದುವರಿಸಲು ಬಿಡಿ. ಇದನ್ನು ವಿವಾದ ಮಾಡಬೇಡಿ. ಸ್ಪೀಕರ್ ಆಗಿ ನನ್ನ ಅಧಿಕಾರವನ್ನೂ ಬಳಸಿ ಪ್ರತಿಯನ್ನು ಹಂಚಿಕೆ ಮಾಡುತ್ತೇವೆ ಎಂದರು.

ಇನ್ನೊಂದೆಡೆ ಸಿಎಂ ಯಡಿಯೂರಪ್ಪ ಅವರು ಕೂಡಲೇ ಪ್ರತಿಯನ್ನು ನೀಡುವಂತೆ ಹೇಳಿದರಲ್ಲದೆ, ಪತ್ರಕರ್ತರಿಗೂ ಬಜೆಟ್ ಭಾಷಣ ಕೇಳುವಂತೆ ಹೇಳಿದ್ದು ಕಂಡುಬಂತು.

ಕಳೆದ ಸಲ ಬಜೆಟ್ ಮಂಡಿಸುವಾಗಲೂ ಬಾಷಣದ ವೇಳೆ ಮುದ್ರಿತ ಪ್ರತಿ ಹಂಚಲಾಗಿರಲಿಲ್ಲ. ಮುಖ್ಯಮಂತ್ರಿಗಳ ಭಾಷಣ ಮುಗಿಯುತ್ತಿದ್ದಂತೆ ಪ್ರತಿಯನ್ನು ಹಂಚಿದ್ದರು ಎಂಬ ಅಂಶವನ್ನು ಅನೇಕರು ಹೇಳಿದ್ದು ಕೇಳಿಸಿತು.