ಕರ್ಣಾಟಕ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ವೀಡಿಯೋ ಕಾನ್ಫರೆನ್‌ಸಿಂಗ್ ಮೂಲಕ ಜರುಗಿದ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಓ ಶ್ರೀಕೃಷ್ಣನ್ ಎಚ್ ಅವರು ಮಾತನಾಡಿದರು. ಚೇರ್ಮನ್ ಪಿ. ಪ್ರದೀಪ್ ಕುಮಾರ್, ಬ್ಯಾಂಕಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್, ನಿರ್ದೇಶಕರಾದ ಜೀವನ್‌ದಾಸ್ ನಾರಾಯಣ್ ಉಪಸ್ಥಿತರಿದ್ದರು. 
ಜಿಲ್ಲೆ

ಕರ್ಣಾಟಕ ಬ್ಯಾಂಕಿನ 99ನೆ ವಾರ್ಷಿಕ ಮಹಾಸಭೆ

ಮಂಗಳೂರು: ಕರ್ಣಾಟಕ ಬ್ಯಾಂಕಿನ 99 ನೆಯ ವಾರ್ಷಿಕ ಮಹಾಸಭೆಯು ಮಂಗಳವಾರ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ವೀಡಿಯೋ ಕಾನ್ಫರೆನ್‌ಸಿಂಗ್ ಮೂಲಕ ಜರುಗಿತು. ಬ್ಯಾಂಕಿನ ಚೇರ್ಮನ್ ಪಿ. ಪ್ರದೀಪ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಶೇರುದಾರರನ್ನು ಉದ್ದೇಶಿಸಿ ಮಾತನಾಡಿದರು.
ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಓ ಶ್ರೀಕೃಷ್ಣನ್ ಎಚ್ ಅವರು ಶೇರುದಾರರ ಪ್ರಶ್ನೆಗಳಿಗೆ ಉತ್ತರಿಸಿದರು. ವಿತ್ತೀಯ ವರ್ಷ 2022-23ಕ್ಕೆ ಅನುವಾಗುವಂತೆ ಪ್ರತಿ ಶೇರ್‌ಗೆ ರೂ. 5 ರಂತೆ (ಶೇ.50) ಡಿವಿಡೆಂಡ್ ಅನ್ನು ಶೇರುದಾರರಿಗೆ ನೀಡಲು ಸಭೆಯಲ್ಲಿ ಅನುಮೋದಿಸಲಾಯಿತು.
ಬ್ಯಾಂಕಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್, ನಿರ್ದೇಶಕರಾದ ಜೀವನ್‌ದಾಸ್ ನಾರಾಯಣ್, ಉನ್ನತ ಅಧಿಕಾರಿಗಳು, ಕಾನೂನು ಸಲಹೆಗಾರರು ಹಾಗೂ ಇ-ಮತದಾನದ ಪರಿವೀಕ್ಷಕರು ಉಪಸ್ಥಿತರಿದ್ದರು.