ಜಿಲ್ಲೆ

ಸೆ.28ರಂದು ಪ್ರಶಸ್ತಿ ಪ್ರದಾನ ಸಮಾರಂಭ: ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಕರ್ನಾಟಕ ಸಂಘದ ವತಿಯಿಂದ ವಿಜ್ಞಾನ ಶಿಕ್ಷಕ ಹಾಗೂ ಜಾನಪದ ಕಲಾವಿದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ.28ರಂದು ಬೆಳಗ್ಗೆ 11 ಗಂಟೆಗೆ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು ತಿಳಿಸಿದರು.

ಎಂ.ಸಿದ್ದರಾಮು ಹೆಸರಿನಲ್ಲಿ ಪಿ.ಸತ್ಯನಾರಾಯಣ ಅವರಿಗೆ ವಿಜ್ಞಾನ ಶಿಕ್ಷಕ ಪ್ರಶಸ್ತಿ, ಸಿ.ನಿಂಗರಾಜು ಹೆಸರಿನಲ್ಲಿ ಚಲುವರಾಜು ಅವರಿಗೆ, ಗುಣಸಾಗರಿ ಸಿ.ನಿಂಗರಾಜು ಹೆಸರಿನಲ್ಲಿ ಪುಟ್ಟಮ್ಮ ಅವರಿಗೆ ಹಾಗೂ ಚನ್ನಮ್ಮ ಕರಿಯಪ್ಪ ಹೆಸರಿನಲ್ಲಿ ಸಿದ್ದಮ್ಮ ಅವರಿಗೆ ಕಲಾವಿದ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆಯ ಸಮಾರಂಭದಲ್ಲಿ ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಶಿವಚಿತ್ತಪ್ಪ ಪ್ರಶಸ್ತಿ ಪ್ರದಾನ ಮಾಡುವರು. ಲೋಕೇಶ್ ಚಂದಗಾಲು ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಸಂಘದ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಹಾಗೂ ಆಂಗ್ಲ ಉಪನ್ಯಾಸಕ ಎಸ್.ಸುದೀಪ್‌ಕುಮಾರ್, ಸಾಹಿತಿಗಳಾದ ಗುಣಸಾಗರಿ ಸಿ.ನಾಗರಾಜು, ಪ್ರೊ.ನರಸಿಂಹೇಗೌಡ ಉಪಸ್ಥಿತರಿರಲಿದ್ದಾರೆ ಎಂದು ವಿವರಿಸಿದರು.

ಸಂಘದ ಖಜಾಂಚಿ ಮಂಜುಳಾ ಉದಯ್‌ಶಂಕರ್, ನಿರ್ದೇಶಕಿ ವತ್ಸಲಾ ಪ್ರಕಾಶ್, ಜೆ.ರಾಜಶೇಖರ್ ಇದ್ದರು.