ಮಂಡ್ಯ: ಖ್ಯಾತ ರಂಗಭೂಮಿ ನಟ ದಿವಂಗತ ಎಂ.ರವಿಪ್ರಸಾದ್ ಹೆಸರಿನಲ್ಲಿ ಕರ್ನಾಟಕ ಸಂಘದಿಂದ ಕೊಡಮಾಡುವ ಎರಡನೇ ವರ್ಷದ ರಾಜ್ಯಮಟ್ಟದ ರಂಗಪ್ರಶಸ್ತಿಗೆ ಕಿರುತೆರೆ ಕಲಾವಿದೆ ನಂದಿನಿ ಆಯ್ಕೆಯಾಗಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸಂಘದ ನಿರ್ದೇಶಕ ನಾಗಪ್ಪ ಹನಕೆರೆ, ಸೆ.14ರಂದು ಸಂಜೆ 5ಗಂಟೆಗೆ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ನಂದಿನಿ ಅವರಿಗೆ 10 ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ಪ್ರದಾನಸಸ ಮಾಡಲಾಗುವುದು ಎಂದರು.
ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ವಹಿಸಲಿದ್ದಾರೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದು, ರಂಗಾಯಣದ ಸದಸ್ಯ ಎಚ್.ಎಸ್.ಸುರೇಶ್‌ಬಾಬು, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಜಿ.ಪಿ.ಒ ಚಂದ್ರು, ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎಸ್.ಮುದ್ದೇಗೌಡ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಕರ್ನಾಟಕ ಸಂಘದ ಕಾರ್ಯದರ್ಶಿ ಎಚ್.ಡಿ.ಸೋಮಶೇಖರ್, ನಿರ್ದೇಶಕರಾದ ಜಯರಾಮು ಕೋಣನಹಳ್ಳಿ, ವಿಜಯಲಕ್ಷ್ಮೀ ರಘುನಂದನ್, ಮಿಮ್ಸ್ ನಿವೃತ್ತ ಪಿಆರ್‌ಒ ಉಮೇಶ್, ಪಟೇಲ್ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ರಾಜಶೇಖರಯ್ಯ ಇದ್ದರು.