ಜಿಲ್ಲೆ

ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಉಸ್ತುವಾರಿ ನೇಮಕ: ಧರ್ಮೇಂದ್ರ ಪ್ರಧಾನ್ ಉಸ್ತುವಾರಿ, ಅಣ್ಣಾಮಲೈ ಸಹ ಉಸ್ತುವಾರಿ

ಬೆಂಗಳೂರು: ರಾಜ್ಯದ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಉಸ್ತುವಾರಿ ಹಾಗೂ ಸಹ ಉಸ್ತುವಾರಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶನಿವಾರ ನೇಮಿಸಿದ್ದಾರೆ.

ಕೇಂದ್ರದ ಶಿಕ್ಷಣ, ಉದ್ಯಮಶೀಲತಾ ಸಚಿವ ಧರ್ಮೇಂದ್ರ ಪ್ರಧಾನ್ ಉಸ್ತುವಾರಿಯನ್ನಾಗಿ ಮತ್ತು ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರನ್ನು ಸಹ ಉಸ್ತುವಾರಿಯಾಗಿ ನಡ್ಡಾ ಅವರು ನೇಮಿಸಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯ ಎಲ್ಲ ಚಟುವಟಿಕೆಗಳು, ಕೈಗೊಂಡ ನಿರ್ಧಾರಗಳ ಅನುಷ್ಠಾನ, ರೂಪಿಸಬೇಕಾದ ಕಾರ್ಯತಂತ್ರ ಹಾಗೂ ವರಿಷ್ಠರು ಕಾಲ ಕಾಲಕ್ಕೆ ನೀಡುವ ಸೂಚನೆಗಳ ಪಾಲನೆ ಜವಾಬ್ದಾರಿಯು ಉಸ್ತುವಾರಿ ಹಾಗೂ ಸಹ ಉಸ್ತುವಾರಿ ಹೆಗಲೇರಿದೆ.

ಅಷ್ಟೇ ಅಲ್ಲ, ಅಭ್ಯರ್ಥಿಗಳ ಆಯ್ಕೆ ನಂತರದ ಸಂಭಾವ್ಯ ಬೆಳವಣಿಗೆಯನ್ನು ನಿಭಾಯಿಸುವ ಹೊಣೆಯಿದ್ದು, ಧರ್ಮೇಂದ್ರ ಪ್ರಧಾನ್​ಗೆ ಈ ಹಿಂದೆ ರಾಜ್ಯ ಚುನಾವಣಾ ಉಸ್ತುವಾರಿಯಾಗಿ ಕೆಲಸ ಮಾಡಿದ ಅನುಭವವಿದೆ.