ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ೇತ್ರಗಳಿಗೆ ಶನಿವಾರ ಮತದಾನ ನಡೆದಿದ್ದು, ಜನಾಶೀರ್ವಾದ ಯಾರಿಗೆ ಎಂಬ ಕುತೂಹಲವಷ್ಟೇ ಬಾಕಿ ಉಳಿದಿದೆ. ನ.2ರ ಮಂಗಳವಾರ ಲಿತಾಂಶದ ಮೇಲೆ ಎಲ್ಲರ ದೃಷ್ಟಿ ನೆಟ್ಟಿರುವಂತೆಯೇ ಮತದಾರರ ನಾಡಿಮಿಡಿತ ಹಿಡಿಯುವ ಪ್ರಯತ್ನವಾಗಿ ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿ ನಡೆಸಿದ ಸಮೀೆ ಪ್ರಕಾರ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾನೇರ ೈಟ್ ನಡೆದಿರುವುದು ಸ್ಪಷ್ಟವಾಗಿದೆ. ಎರಡೂ ೇತ್ರಗಳಲ್ಲಿ ವಿವಿಧ ಆಯಾಮಗಳಲ್ಲಿ ಮತದಾರರ ಮುಂದೆ ಪ್ರಶ್ನೆ ಇಟ್ಟು ಅವರ ಒಲವು ಯಾವ ಕಡೆ ಎಂದು ತಿಳಿಯಲು ಪ್ರಯತ್ನಿಸಲಾಗಿದೆ. ಬಿಜೆಪಿ ಕೂದಲೆಳೆ ಅಂತರದಲ್ಲಿ ಗೆಲುವಿನ ದಡ ಸೇರುವಂತೆ ಕಾಣಿಸುತ್ತದೆಯಾದರೂ ಪೂರ್ಣ ಸ್ಪಷ್ಟ ಚಿತ್ರಣ ಗೋಚರಿಸಿಲ್ಲ.
ಬದಲಾದ ಟ್ರೆಂಡ್: ಚುನಾವಣೆ ಘೋಷಣೆಯಾದಾಗ ಇದ್ದ ಟ್ರೆಂಡ್ ಕೊನೇ ವಾರದಲ್ಲಿ ಬದಲಾಗಿ ಪ್ರಬಲ ಪೈಪೋಟಿ ಕಾಣಿಸಿತ್ತು. ತ್ರಿಕೋನ ಸ್ಪರ್ಧೆಯ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆದಿತ್ತು. ಕೊನೆಯ 3&4 ದಿನಗಳಿರುವಾಗ ಚಿತ್ರಣ ಮತ್ತಷ್ಟು ತಿರುವು ಪಡೆದುಕೊಂಡಿತು. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಕಾಣಿಸಿತು. ಹೀಗೆ ಪ್ರಚಾರದ ಕಾವು ಹೆಚ್ಚಾದಂತೆ ಮತದಾರನ ಒಲವು ಮಗ್ಗುಲು ಬದಲಿಸಿರುವುದು ಮತದಾನ ಮುಗಿದ ನಂತರ ಮೇಲ್ನೋಟಕ್ಕೆ ಕಾಣಿಸಿದೆ.
ಲೆಕ್ಕಾಚಾರವೇನು?
ಕಾಂಗ್ರೆಸ್: ಬೆಲೆ ಏರಿಕೆ , ಬಿಜೆಪಿ ನಾಯಕತ್ವ ಬದಲಾವಣೆ, ಕರೊನಾ ನಿರ್ವಹಣೆಯಲ್ಲಿ ವಿಲತೆ ವಿಚಾರ, ಅನುಕಂಪ ಎರಡೂ ೇತ್ರದಲ್ಲಿ ಕೆಲಸ ಮಾಡಿದೆ. ಸಿಂದಗಿಯಲ್ಲಿ ಅತಿ ಕಡಿಮೆ ಅಂತರದ ಗೆಲುವಾಗಬಹುದು. ಹಾನಗಲ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಗೆಲ್ಲುವುದು. ಹಾನಗಲ್ನಲ್ಲಿ 3&4 ಸಾವಿರ ಮತಗಳ ಅಂತರ, ಸಿಂದಗಿಯಲ್ಲಿ 4&5 ಸಾವಿರ ಮತಗಳ ಅಂತರದಲ್ಲಿ ವಿಜಯಿಯಾಗಬಹುದು.
ಬಿಜೆಪಿ: ಆರಂಭದಲ್ಲಿದ್ದ ಗೊಂದಲ ಪರಿಹರಿಸಿಕೊಳ್ಳಲಾಗಿದೆ. ಬಿಎಸ್ವೈ ಪ್ರಚಾರ ಬಲ ತಂದುಕೊಟ್ಟಿದೆ. ಮುಖ್ಯಮಂತ್ರಿಯವರು ಹೆಚ್ಚಿನ ಶ್ರಮಹಾಕಿದ್ದು ಮತ್ತು ಪ ಸಂಟನೆ ಬೇರುಮಟ್ಟದಲ್ಲಿ ಕೆಲಸ ಮಾಡಿದ್ದು ಎರಡೂ ಕಡೆ ಗೆಲುವು ಖಚಿತ. ಹಾನಗಲ್ನಲ್ಲಿ 6&8 ಸಾವಿರ ಮತಗಳ ಲೀಡ್ ಸಿಗಬಹುದು, ಸಿಂದಗಿಯಲ್ಲಿ 3&4 ಸಾವಿರ ಮತಗಳ ಮುನ್ನಡೆ ಸಿಗಬಹುದು.
ಜೆಡಿಎಸ್ ಸಿಂದಗಿಯಲ್ಲಿ ಕಳೆದ ಬಾರಿ ಜೆಡಿಎಸ್ ಗೆದ್ದಿತ್ತು, ಈ ಬಾರಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರಿಂದ ಪಕ್ಷಕ್ಕೆ ಲಾಭವಾಗಿದೆ. ಅಲ್ಲಿ ತ್ರಿಕೋನ ಸ್ಪರ್ಧೆ ನಡೆದು ಗೆಲುವಿನ ದಡ ಮುಟ್ಟುವ ಮೂಲಕ ೇತ್ರ ಉಳಿಸಿಕೊಳ್ಳುವುದು ನಿಶ್ಚಿತ. ಸಿಂದಗಿಯಲ್ಲಿ 2&3 ಸಾವಿರ ಮತಗಳ ಅಂತರದಲ್ಲಿ ಗೆಲ್ಲಬಹುದು.
ಹಾನಗಲ್ನಲ್ಲಿ ಯಾರಿಗೆ ಬೆಂಬಲ
ಕಾಂಗ್ರೆಸ್ : 43.75%
ಬಿಜೆಪಿ : 43.99%
ಜೆಡಿಎಸ್ : 05.69%
ಇತರೆ : 01.02%
ಗೊಂದಲ : 05.55%
ಸಿಂದಗಿ ಮತದಾರನ ಮನದಾಳ
ಕಾಂಗ್ರೆಸ್ : 39.93%
ಬಿಜೆಪಿ : 41.64%
ಜೆಡಿಎಸ್ : 05.88%
ಇತರೆ : 02.35%
ಗೊಂದಲ : 10.20%
ಹಾನಗಲ್ನಲ್ಲೇನು ವರಸೆ?
1. ಇಂಧನ ಬೆಲೆ ಏರಿಕೆ ಚುನಾವಣೆಯ ಮೇಲೆ ಪರಿಣಾಮ ಬೀರಿದೆಯೇ?
ಹೌದು: 47% ಇಲ್ಲ : 49% ಗೊತ್ತಿಲ್ಲ : 4%
2. ಈ ಚುನಾವಣೆಗೆ ಪ್ರಮುಖ ವಿಷಯ ಯಾವುದು?
ರಸ್ತೆ: 27% ನೀರಾವರಿ: 44% ಶಿಣ : 29%
3. ಬೊಮ್ಮಾಯಿ ಸರ್ಕಾರದ ಕಾರ್ಯವೈಖರಿ ತೃಪ್ತಿಕರವಾಗಿದೆಯೇ?
ಹೌದು : 54% ಇಲ್ಲ : 41% ಗೊತ್ತಿಲ್ಲ : 5%
4. ಬಿಎಸ್ವೈ ಬದಲಾವಣೆ ಪರಿಣಾಮ ಬೀರುತ್ತಾ?
ಹೌದು: 58% ಇಲ್ಲ: 34% ಗೊತ್ತಿಲ್ಲ: 8%
5. ಜೆಡಿಎಸ್ ಅಲ್ಪಸಂಖ್ಯಾತ ತಂತ್ರಗಾರಿಕೆ ಲೆಕ್ಕಾಚಾರ ಬದಲಿಸುವುದೇ?
ಹೌದು : 25% ಇಲ್ಲ: 64% ಗೊತ್ತಿಲ್ಲ : 11%
6. ಸಿದ್ದರಾಮಯ್ಯ ಪ್ರಚಾರ ಕಾಂಗ್ರೆಸ್ಗೆ ಅನುಕೂಲವೇ?
ಹೌದು : 44% ಇಲ್ಲ : 51% ಗೊತ್ತಿಲ್ಲ : 5%
ಸಿಂದಗಿಯ ಮನದಾಳವೇನು?
1. ಇಂಧನ ಬೆಲೆ ಏರಿಕೆ ಚುನಾವಣೆ ಮೇಲೆ ಪರಿಣಾಮ ಬೀರಿದೆಯಾ?
ಹೌದು : 52% ಇಲ್ಲ : 42% ಗೊತ್ತಿಲ್ಲ : 6%
2. ಅನುಕಂಪದ ಅಲೆ ಕೆಲಸ ಮಾಡಲಿದೆಯೇ ?
ಹೌದು : 46% ಇಲ್ಲ : 46% ಗೊತ್ತಿಲ್ಲ : 8%
3. ಬೊಮ್ಮಾಯಿ ಸರ್ಕಾರದ ಕಾರ್ಯವೈಖರಿ ತೃಪ್ತಿಕರವಾಗಿದೆಯಾ ?
ಹೌದು : 44% ಇಲ್ಲ : 49% ಗೊತ್ತಿಲ್ಲ : 7%
4. ಬಿಎಸ್ವೈ/ ವಿಜಯೇಂದ್ರ ಪ್ರಚಾರ ಚುನಾವಣೆ ಮೇಲೆ ಪರಿಣಾಮ ಬೀರುತ್ತಾ?
ಹೌದು : 60% ಇಲ್ಲ : 40% ಗೊತ್ತಿಲ್ಲ: 10%
5. ಎಚ್ಡಿಕೆ ಪ್ರಚಾರ, ತಂತ್ರ ಜೆಡಿಎಸ್ಗೆ ಲಾಭವೇ..?
ಹೌದು : 24% ಇಲ್ಲ : 67% ಗೊತ್ತಿಲ್ಲ : 9%
6. ಕೋವಿಡನ್ನು ಸರ್ಕಾರ ನಿರ್ವಹಿಸುತ್ತಿದೆಯೇ..?
ಹೌದು : 47% ಇಲ್ಲ : 46% ಗೊತ್ತಿಲ್ಲ: 7%
ಉತ್ತಮ ಮತದಾನ
ಬೆಂಗಳೂರು: ಉಪಸಮರದಲ್ಲಿ ತುರುಸಿನ ಸ್ಪರ್ಧಾ ಕಣವಾದ ಹಾನಗಲ್ ವಿಧಾನಸಭೆ ಕ್ಷೇತ್ರದಲ್ಲಿ ಶೇ.84 ಹಾಗೂ ಸಿಂದಗಿ ಕ್ಷೇತ್ರದಲ್ಲಿ ಶೇ.69ರಷ್ಟು ಮತದಾನವಾಗಿದೆ. ಎರಡೂ ಕ್ಷೇತ್ರಗಳ ಮತದಾರರು ಉತ್ಸಾಹದಿಂದಲೇ ಪಾಲ್ಗೊಂಡು ಹಕ್ಕು ಚಲಾಯಿಸಿದ್ದಾರೆ.