ಜಿಲ್ಲೆ

ಕರ್ನಾಟಕ ಆರ್ಟ್ಸ್ ಕಾಲೇಜು ಎನ್‌ಸಿಸಿ ಘಟಕ ಚಾಂಪಿಯನ್

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಐಐಟಿಯಲ್ಲಿ 24ನೇ ಕರ್ನಾಟಕ ಬಟಾಲಿಯನ್ ಇತ್ತೀಚೆಗೆ ನಡೆಸಿದ ಕ್ಯಾಂಪನ್‌ಲ್ಲಿ ಇಲ್ಲಿನ ಕರ್ನಾಟಕ ಆರ್ಟ್ಸ್ ಕಾಲೇಜಿನ 2/24 ಎನ್‌ಸಿಸಿ ಘಟಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೆಡೆಟ್‌ಗಳು ಗಾರ್ಡ್ ಆಫ್ ಆನರ್, ವಾಲಿಬಾಲ್ ಹಾಗೂ ಅಥ್ಲೆಟಿಕ್ಸ್ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಎನ್‌ಸಿಸಿ ಸಹಾಯಕ ಅಧಿಕಾರಿ ಡಾ. ವೈ.ಎಸ್. ರಾಹುತ್ ಮತ್ತು ಕಮಾ0ಡಿ0ಗ್ ಆಫೀಸರ್ ಕರ್ನಲ್ ಜೆ.ಆರ್. ಚೌಧರಿ ಕೆಡೆಟ್‌ಗಳಿಗೆ ಮಾರ್ಗದರ್ಶನ ನೀಡಿದ್ದರು.