ಜಿಲ್ಲೆ

ಕರ್ನಾಟಕ ಏಕೀಕರಣ ಚಳುವಳಿ ಐತಿಹಾಸಿಕ ದಾಖಲೆಗಳ ಮತ್ತು ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟನೆ

ಗದಗ: ಕರ್ನಾಟಕ ಪತ್ರಗಾರ ಇಲಾಖೆ, ಪ್ರಾದೇಶಿಕ ಪತ್ರಗಾರ ಇಲಾಖೆ ಧಾರವಾಡ ಹಾಗೂ ಶ್ರೀ. ಕೆ.ಎಚ್.ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಹುಲಕೋಟಿ ಇವರುಗಳ ಸಹಯೋಗದಲ್ಲಿ ಹುಲಕೋಟಿಯ ಕೆ.ಎಚ್.ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರದಂದು ಆಯೋಜಿಸಲಾಗಿದ್ದ ಮೂರು ದಿನಗಳ ಕರ್ನಾಟಕ ಏಕೀಕರಣ ಚಳುವಳಿ ಐತಿಹಾಸಿಕ ದಾಖಲೆಗಳ ಮತ್ತು ಛಾಯಾಚಿತ್ರಗಳ ಪ್ರದರ್ಶನವನ್ನು ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ಪತ್ರಗಾರ ಇಲಾಖೆ ನಿರ್ದೇಶಕ ಗವಿಸಿದ್ದಯ್ಯ, ಹುಲಕೋಟಿಯ ಕೆ.ಎಚ್.ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಶಿವಪ್ಪ ಕುರಿ, ಧಾರವಾಡ ಪ್ರಾದೇಶಿಕ ಪತ್ರಾಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಿ ಮಂಜುಳಾ ಯಲಿಗಾರ,  ಗದಗ ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎ.ರಡ್ಡೇರ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾದ್ಯಾಪಕರಾದ ಡಾ.ಅಪ್ಪಣ್ಣ. ಹಂಜೆ, ಗಣ್ಯರಾದ ಜೆ.ಕೆ.ಜಮಾದಾರ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ವಿಧ್ಯಾರ್ಥಿಗಳು, ಉಪಸ್ಥಿತರಿದ್ದರು.

ಛಾಯಾಚಿತ್ರ ಪ್ರದರ್ಶನದಲ್ಲಿ ಕರ್ನಾಟಕದ ಬಗ್ಗೆ ರಾಜ ಪ್ರಮುಖರ ಅಭಿಪ್ರಾಯ, ಕರ್ನಾಟಕ ಪ್ರಾಂತ್ಯ ರಚನೆಗೆ ನೆಹರೂರವರ ಬೆಂಬಲ, ಬೊಂಬಾಯಿ ಶಾಸನ ಸಭೆಯಲ್ಲಿ ಕನ್ನಡ ಸದಸ್ಯರ ಗೈರು ಹಾಜರಿ, ಉಳುವವನಿಗೆ ಭೂಮಿ ಕೊಡಿಸುವ ಮಸೂದೆ ಪರೀಶಿಲನೆ, ಕರ್ನಾಟಕ ಕೀರ್ತಿ ಸಂಭ, ನವಭಾರತ- ಶಾಂತಿ ಮಾರ್ಗದಿಂದಲೇ ಏಕೀಕರಣ ಸಾಧನೆಯಾಗಬೇಕು, ಬೊಂಬಾಯಿ ಕನ್ನಡ ಶಾಲೆಯ ನೂತನ ಕಟ್ಟಡ, ಸರದಾರ ವೀರನಗೌಡರು ಶ್ರೀ ಮತಿ ನಾಗಮ್ಮನವರಿಗೆ ಬೆಳಗಾವಿ ಸೆಂಟ್ರಲ್ ಜೈಲಿನಿಂದ ಬರೆದ ಪತ್ರ, ಕೋರ್ಟುಗಳಲ್ಲಿ ಕನ್ನಡ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ, ನವಭಾರತ -ಕರ್ನಾಟಕ ಪ್ರಾಂತ್ಯ ರಚನೆ, ಕನ್ನಡದ ಉತ್ಸವ, ಬಿಜಾಪೂರ ನ್ಯಾಯಾಲಕ್ಕೆ ಬಾಬಾಸಾಹೇಬರ ಅವಿಸ್ಮರಣೀಯ ಭೇಟಿ ಸೇರಿದಂತೆ ಇನ್ನೂ ಅನೇಕ ಐತಿಹಾಸಿಕ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ.