ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಶನಿವಾರ ಬಿಡುಗಡೆಗೊಳಿಸಲಾಯಿತು.
ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಬಿಡುಗಡೆಗೊಳಿಸಿದರು. ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಟಿ.ಕೆ.ನಾರಾಯಣ ಭಟ್ ಪಂಜಿತ್ತಡ್ಕ, ಉದ್ಯಮಿ ಸತೀಶ್ ಎಡನೀರು ಪಾಲ್ಗೊಂಡಿದ್ದರು. ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಟ್ರಸ್ಟಿಗಳಾದ ರಾಧಾಕೃಷ್ಣ ರೈ, ನವೀನ್‌ಚಂದ್ರ, ಗೋಪಾಲ ಭಟ್ ಪಿ.ಎಸ್, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶ್ಯಾಮಪ್ರಸಾದ ಮೇಗಿನಡ್ಕ, ಶ್ರೀಕೃಷ್ಣ ಭಟ್ ಪುದುಕೋಳಿ, ಸುಂದರ ಶೆಟ್ಟಿ ಕೊಲ್ಲಂಗಾನ, ವಿಜಯಕುಮಾರ್ ಮಾನ್ಯ, ಜ್ಯೋತಿ ಕಾರ್ಮಾರು, ಪೂರ್ಣಿಮಾ ಕಾರ್ಮಾರು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ, ಕೋಶಾಧಿಕಾರಿ ರಂಜಿತ್ ಯಾದವ್, ಭಗವದ್ಭಕ್ತರು ಪಾಲ್ಗೊಂಡಿದ್ದರು.