ಜಿಲ್ಲೆ

ಕಾರ್ಕಳ ವ್ಯಕ್ತಿಗಿಲ್ಲ ಕರೊನ

Udupi

ಉಡುಪಿ: ಶಂಕಿತ ಕರೊನ ವೈರಸ್ ಪ್ರಕರಣಕ್ಕೆ ಸಂಬಂಧಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಕಳ ತಾಲೂಕಿನ 70 ವರ್ಷದ ವ್ಯಕ್ತಿಗೆ ಸೊಂಕು ಇಲ್ಲ ಎಂಬುದು ದೃಡಪಟ್ಟಿದೆ. ಶನಿವಾರ ಮಧ್ಯಾಹ್ನ ಬೆಂಗಳೂರು ಮೆಡಿಕಲ್ ಕಾಲೇಜು ಪ್ರಯೋಗಾಲಯದ ವರದಿ ಜಿಲ್ಲಾಡಳಿತ ಕೈಸೇರಿದ್ದು, ವರದಿಯಲ್ಲಿ ನೆಗೆಟಿವ್ ಎಂದು ಸ್ಪಷ್ಟಪಡಿಸಲಾಗಿದೆ. ಮಂಗಳವಾರ ಇಸ್ರೇಲ್‌ನಿಂದ ಉಡುಪಿಗೆ ಆಗಮಿಸಿದ್ದ ಕುಟುಂಬ ಒಂದರಲ್ಲಿ ವ್ಯಕ್ತಿಗೆ ಮಾತ್ರ ಅನಾರೋಗ್ಯ ಕಾಣಿಸಿಕೊಂಡಿತ್ತು. ಜಿಲ್ಲಾಸ್ಪತ್ರೆ ಪ್ರತ್ಯೇಕ ವಾರ್ಡ್‌ನಲ್ಲಿ ಪರ್ಸನಲ್ ಪ್ರೊಟೆಕ್ಟ್ ಇಕ್ವಿಪ್‌ಮೆಂಟ್(ಪಿಪಿಇ) ಧರಿಸಿ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತಿತ್ತು. ರಕ್ತದ ಮಾದರಿ ಮತ್ತು ಗಂಟಲಿನ ದ್ರವವನ್ನು ಪ್ರಾಯೋಗಾಲಯಕ್ಕೆ ಕಳುಹಿಸಲಾಗಿತ್ತು. ಜಿಲ್ಲೆಯಲ್ಲಿ ಶಂಕಿತ ಕರೊನ ವೈರಸ್ ಪ್ರಕರಣಕ್ಕೆ ಸಂಬಂಧಿಸಿ ನೆಗೆಟಿವ್ ಬಂದಿರುವುದು ಇದು 4ನೇ ಪ್ರಕರಣವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕರೊನ ಆತಂಕ ದೂರವಾಗಿದೆ.