ಜಿಲ್ಲೆ

ಕಾರ್ಕಳ ಠಾಣೆಗಳು ತಾತ್ಕಾಲಿಕ ಶಿಫ್ಟ್

Udupi

ಕಾರ್ಕಳ: ಕರೊನಾ ವೈರಸ್ ಸೋಂಕಿಗೆ ಕಾರ್ಕಳ ತಾಲೂಕಿನ ಗ್ರಾಮಾಂತರ, ನಗರ, ವೃತ್ತ ನಿರೀಕ್ಷಕ ಕಚೇರಿ, ಅಜೆಕಾರು ಪೊಲೀಸ್ ಠಾಣೆಗಳು ಸೀಲ್‌ಡೌನ್ ಆಗಿವೆ. ಕಾರ್ಕಳ ಗ್ರಾಮಾಂತರ, ನಗರ ಹಾಗೂ ವೃತ್ತ ನಿರೀಕ್ಷಕ ಕಚೇರಿ ಒಂದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

ನಗರ ಠಾಣೆಯ 33 ಸಿಬ್ಬಂದಿ ಮತ್ತು ವೃತ್ತ ನಿರೀಕ್ಷಕ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ವರು ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಅಜೆಕಾರು ಠಾಣೆಯ ಸಿಬ್ಬಂದಿ ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಗ್ರಾಮಾಂತರ ಠಾಣೆಯ ಸಿಬ್ಬಂದಿ ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಕಾರ್ಕಳ ನಗರ, ಗ್ರಾಮಾಂತರ, ಕ್ರೈಂ ಮತ್ತು ಅಜೆಕಾರಿನ ಎಸ್‌ಐಗಳನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಹಾಗೂ ಗ್ರಾಮಾಂತರ ಠಾಣೆ ಸಿಬ್ಬಂದಿಯನ್ನು ಹೊರತುಪಡಿಸಿ ಉಳಿದವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಕರೊನಾ ಪೀಡಿತ ಗ್ರಾಮಾಂತರ ಠಾಣೆ ಸಿಬ್ಬಂದಿ ಮೂಲತಃ ಉತ್ತರ ಕರ್ನಾಟಕದವರಾಗಿದ್ದ ಬಂಟ್ವಾಳ ತಾಲೂಕಿನ ಕೊಯಿಲದಲ್ಲಿ ಮನೆ ಮಾಡಿದ್ದರು. ಈ ಮನೆಯಲ್ಲಿ ವಾಸವಾಗಿರುವ ಪತ್ನಿ ಸಹಿತ ಐವರಿಗೆ ಹೋಂ ಕ್ವಾರಂಟೈನ್ ವಿಧಿಸಲಾಗಿದೆ.

ಪತ್ನಿ ಮೂಡುಬಿದಿರೆ ಸರ್ಕಾರಿ ಇಲಾಖೆ ಸಿಬ್ಬಂದಿ

ಕರೊನಾ ಸೋಂಕು ದೃಢಪಟ್ಟ ಗ್ರಾಮಾಂತರ ಠಾಣೆ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 30 ಸಿಬ್ಬಂದಿಯನ್ನು ನಿಟ್ಟೆ ಪರಿಸರದ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ದೇವರಾಜ ಅರಸ ಕಟ್ಟಡ ಬಳಿ ಕಾರ್ಕಳ ನಗರ ಹಾಗೂ ಗ್ರಾಮಾಂತರ ಠಾಣೆಗಳು ತಾತ್ಕಾಲಿಕ ಕಾರ್ಯನಿರ್ವಹಿಸಲಿದೆ. ಅಜೆಕಾರು ಠಾಣೆ ತಾತ್ಕಾಲಿಕವಾಗಿ ಅಜೆಕಾರು ಪೇಟೆಯ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬ್ರಹ್ಮಾವರ ಠಾಣೆ ಹಿಂಭಾಗದ ಹಳೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಎಲ್ಲ ಠಾಣೆಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.