ಜಿಲ್ಲೆ

ಕರಿಯಮ್ಮದೇವಿ ಜಾತ್ರಾ ಮಹೋತ್ಸವ ಇಂದಿನಿಂದ

ಶಿರಸಂಗಿ: ಗ್ರಾಮದಲ್ಲಿ ಜೂ.5 ರಿಂದ 10ರ ವರೆಗೆ ಶ್ರೀ ಕರಿಯಮ್ಮದೇವಿ ಜಾತ್ರಾ ಮಹೋತ್ಸವ ಜರುಗಲಿದೆ. ಜೂ.5 ರಂದು ಬೆಳಗ್ಗೆ 10 ಗಂಟೆಗೆ ನೂತನ ರಥವನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಗುವುದು. ಜೂ.6 ಮತ್ತು 7 ರಂದು ರಥ ಜೋಡಣೆ ಕಾರ್ಯ ನೆರವೇರಲಿದೆ. ಜೂ.8 ಮತ್ತು 9 ರಂದು ಶ್ರೀ ಕರಿಯಮ್ಮ ದೇವಿಗೆ ಮಹಾ ರುದ್ರಾಭಿಷೇಕ ಹಾಗೂ ಹೋಮ, ಹವನ ನೆರವೇರಲಿವೆ. ಜೂ.10ರಂದು ಬೆಳಗ್ಗೆ 8.45 ಕ್ಕೆ ಕಳಸಾರೋಹಣ, ಸಂಜೆ 5 ಗಂಟೆಗೆ ಪುರವಂತರ ಸೇವೆ ಹಾಗೂ ವಿವಿಧ ವಾದ್ಯಗಳೊಂದಿಗೆ ರಥೋತ್ಸವ ಜರುಗಲಿದೆ. ಚಂದ್ರಶೇಖರ ಸ್ವಾಮೀಜಿ, ಶಿವಮೂರ್ತಿ ಸ್ವಾಮೀಜಿ, ಅಜ್ಜಯ್ಯ ಶಾಸ್ತ್ರಿ, ತೇಜಪ್ಪಾಚಾರ್ಯ ಮೂಕಿ, ಇಂದ್ರಾಚಾರ್ಯ ಗಂಗಣೈನವರ ಸಾನ್ನಿಧ್ಯ ವಹಿಸುವರು ಎಂದು ಜಾತ್ರಾ ಮಹೋತ್ಸವ ಕಮಿಟಿ ವ್ಯವಸ್ಥಾಪಕ ಸದಸ್ಯ ಶಿವಪ್ಪ ಮಾಸ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ೋಟೋ:4ಶಿರಸಂಗಿ1: