ಮಹಾಲಿಂಗಪುರ: ಕರಿಸಿದ್ಧೇಶ್ವರರು ಸಾಕ್ಷಾತ್ ಶಿವ ಪಾರ್ವತಿಯರ ಕ್ರಪಾಶೀರ್ವಾದದಿಂದ ಅವತಾರವೆತ್ತಿ ಭೂಲೋಕಕ್ಕೆ ಬಂದು ಭಕ್ತರನ್ನು ಉದ್ಧರಿಸುತ್ತಿದ್ದಾರೆ ಎಂದು ಜೋಕಾನಟ್ಟಿಯ ಯೋಗಿ ಸಿದ್ಧೇಶ್ವರ ಮಠದ ಬಿಳಿಯಾನಿಸಿದ್ಧ ಸ್ವಾಮಿಗಳು ಹೇಳಿದರು.
ನಗರದ ಶ್ರೀ ಕರಿಸಿದ್ಧೇಶ್ವರ ದೇವಸ್ಥಾನದ ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ನಡೆಯುತ್ತಿರುವ ಐದು ದಿನಗಳ ಪ್ರವಚನದ ಮೊದಲನೇ ದಿನ ಭಾನುವಾರ ಸಂಜೆ ಮುಖ್ಯ ಪ್ರವಚನಕಾರರಾಗಿ ಭಾಗವಹಿಸಿ ಮಾತನಾಡಿದರು.
ಅನುಭಾವಿಗಳ ಅನುಭವದ ಮಾತು ಆಲಿಸುವುದು ಮತ್ತು ಅದರಂತೆ ನಡೆಯುವುದರಿಂದ ಮನುಷ್ಯ ಮಾನಸಿಕ ನೆಮ್ಮದಿ ಕಂಡುಕೊಳಲು ಸಾಧ್ಯ ಎಂದರು.
ಕಾಡಮ್ಮಗಿರಿಯ ಅವಧೂತಸಿದ್ಧರು ಹಾಗೂ ಶರಣ ಮಹೇಶ ಇಟಕನ್ನವರ ಮಾತನಾಡಿ, ಮಾನಸಿಕ ನೆಮ್ಮದಿ ಇಲ್ಲ ಅಂದರೆ ಬದುಕು ಕಷ್ಟ ಅನಿಸುತ್ತದೆ. ನೆಮ್ಮದಿಗೆ ನಿರ್ಮಲ ಭಕ್ತಿ ಅಗತ್ಯ. ಮಠ-ಮಂದಿರಗಳು ಮನುಷ್ಯನ ಬದುಕಿಗೆ ಬೆಳಕು ಹಾಗೂ ನೆಮ್ಮದಿ ನೀಡುವ ದೇವಮಂದಿರಗಳಾಗಿವೆ ಎಂದು ತಿಳಿಸಿದರು.
ಗಣ್ಯರಾದ ಸತ್ಯಪ್ಪ ಹುದ್ದಾರ, ಸೂರಪ್ಪ ಮುಂಡಗನೂರ, ಚಂದ್ರಪ್ಪ ಡೋಣಿ, ಶ್ರೀಕಾಂತ ಮುದೇಗೋಳ, ಸದ್ಭಕ್ತರಾದ ಮಹಾಲಿಂಗಪ್ಪ ಜಕ್ಕಣ್ಣವರ, ಗಂಗಾಧರ ಮೇಟಿ, ಮಹಾಲಿಂಗಪ್ಪ ಬಾಡಗಿ, ಮಲ್ಲನಗೌಡ ಪಾಟೀಲ, ಸುರೇಶ ಲಾತೂರ, ಕಲ್ಲಪ್ಪ ಚಿಂಚಲಿ, ಯಲ್ಲನಗೌಡ ಪಾಟೀಲ, ಬಸವರಾಜ ಮೇಟಿ, ಮಹಾಲಿಂಗ ಹೊಸೂರ, ಕರೆಪ್ಪ ಮೇಟಿ, ಜೋತೆಪ್ಪ ಕಪರಟ್ಟಿ, ಪರಶು ಕೊಣ್ಣೂರ, ಹಣಮಂತ ಸಂಶಿ, ಹಣಮಂತ ಅವಟಗಿ, ಭರಮಪ್ಪ ಅವಟಗಿ, ಕರೆಪ್ಪ ಪೂಜೇರಿ, ಶ್ರೀಶೈಲ ಅವಟಗಿ, ಮುತ್ತು ದಿವಾನ, ಪರಶು ಬಂಡಿ, ಯಲ್ಲಪ್ಪ ಪಟ್ಟಣಕೋಡಿ, ಈರಪ್ಪ ಜಕ್ಕಣ್ಣವರ, ವಿಠಲ ಬನಾಜ ಇತರರಿದ್ದರು.
ಲಕ್ಷ್ಮಣ ಕಿಶೋರ ನಿರೂಪಿಸಿ, ವಂದಿಸಿದರು. ಶ್ರೀಕಾಂತ ಮುದೇಗೋಳ ಮಹಾಪ್ರಸಾದ ವ್ಯವಸ್ಥೆ ಮಾಡಿದ್ದರು.