ಅಳವಂಡಿ ಸಮೀಪದ ವದಗನಾಳ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡ ಕರಿಯಮ್ಮ ದೇವಿ ನೂತನ ಮೂರ್ತಿ. 
ಜಿಲ್ಲೆ

ಕರಿಯಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ಅದ್ದೂರಿ

Kopala - Desk - Eraveni

ಅಳವಂಡಿ: ಸಮೀಪದ ವದಗನಾಳ ಗ್ರಾಮದಲ್ಲಿ ಕರಿಯಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಾಗಿ ನಡೆಯಿತು. ಗುರುವಾರ ಕರಿಯಮ್ಮ ದೇವಿ ಮೂರ್ತಿ ಧಾನ್ಯಧಿವಾಸ ಶಯನೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳು ನಡೆದವು.

ಶುಕ್ರವಾರ ಬೆಳಗ್ಗೆ ಹೋಮ-ಹವನ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು. ನಂತರ ಅನ್ನ ಸಂತರ್ಪಣೆ ನಡೆಯಿತು. ಪ್ರಮುಖರಾದ ಸೋಮನಾಯಕ ವಾಲ್ಮೀಕಿ, ಗುಡದನಗೌಡ, ಬಸನಗೌಡ ಗೊಂಡದಿಹೊಸಹಳ್ಳಿ, ಕರಿಯಪ್ಪ ಅಳವಂಡಿ, ಮುರಾರೆಪ್ಪ ಶ್ಯಾನಭೋಗರ, ನಿಂಗಪ್ಪ ಅಮಾತಿ, ಹಮ್ಮಿಗೇಶ ಹೆಗ್ಗನಗೌಡ್ರು, ದೇವಣ್ಣ ಉಪ್ಪಾರ, ಶರಣಪ್ಪ ಮಂಡಲಗೇರಿ, ಕರಿಬಸಯ್ಯ ಹಿರೇಮಠ ಇತರರಿದ್ದರು.