ಜಿಲ್ಲೆ

ಕಾರ್ಗಿಲ್ ಯದ್ಧವೇ ಒಂದು ರೋಚಕ ಕಥೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾರ್ಗಿಲ್ ಯುದ್ಧದ ಕಾರ್ಯಚರಣೆ ಒಂದು ಸಾಹಸದ ಕಥೆ. ಇದೊಂದು ಸಾಹಸಮಯ, ರೋಚಕ ಕಾರ್ಯಾಚಾರಣೆ ಆಗಿದೆ ಎಂದು ನಿವೃತ್ತ ಏರ್​ ವೈಸ್​ ಮಾರ್ಷಲ್​ ಧನಂಜಯ ವಿಷ್ಣು ವಾಣಿ ಅಭಿಪ್ರಾಯಪಟ್ಟರು.
ಹು-ಧಾ ಏರ್​ ಫೋರ್ಸ್​ ಅಸೋಸಿಯೇಷನ್​ ಮತ್ತು ಕರ್ನಾಟಕ ವಿಜ್ಞಾನ ಕಾಲೇಜು ಸಹಯೋಗದಲ್ಲಿ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯ ದಿನದ 25ನೇ ವಾಷಿರ್ಕೋತ್ಸವ ಸಮಾರಂಭದಲ್ಲಿ "ಕಾರ್ಗಿಲ್ ಯುದ್ಧದ ಕಾರ್ಯಾಚರಣೆಯಲ್ಲಿ ವಾಯು ಸೇನೆ ಪಾತ್ರ' ಕುರಿತು ಮಾತನಾಡಿದರು.
ಕಾರ್ಗಿಲ್ ಯುದ್ಧದ ಕಾರ್ಯಚರಣೆಯಲ್ಲಿ ಭೂ ಸೇನೆ, ವಾಯು ಸೇನೆ ತಮ್ಮದೇ ಆದ ಕೊಡುಗೆ ನೀಡಿವೆ. ಪಾಕಿಸ್ತಾನದ ಒಳಸಂಚು ಅರಿತು ಪಾಕ್​ ಆಕ್ರಮಿತ ಪ್ರದೇಶ ವಶಪಡಿಸಿಕೊಳ್ಳುವುದು ಒಂದು ಸವಾಲಿನ ಕೆಲಸವಾಗಿತ್ತು. ವಾಯು ಸೇನೆ ಸಫೇದ ಸಾಗರ ಹೆಸರಿನ ಕಾರ್ಯಾಚರಣೆ ನಡೆಸಿತ್ತು. ಆಗ ಹಿಮಾಲಯದ ಎತ್ತರದ ಪರ್ವತ ಶ್ರೇಣಿಗಳಲ್ಲಿ ಕಾರ್ಯಾಚರಣೆ ನಡೆಸುವುದು ಕಷ್ಟಕರವೇ ಆಗಿತ್ತು ಎಂದರು.
ಸಿ.ಎಸ್​. ಹವಾಲ್ದಾರ್​ ಮಾತನಾಡಿ, ಯುದ್ಧದಲ್ಲಿ ಅನೇಕ ಸೈನಿಕರು ಹುತಾತ್ಮರಾದರು. ಹಿಮಾಲಯದ ಕಣಿವೆಗಳಲ್ಲಿ ವಾಯು ಸೇನೆಯ ಸೈನಿಕರು ತಮ್ಮ ಸಾಹಸ ಮೆರೆದಿದ್ದಾರೆ. ದೇಶದ ರಕ್ಷಣಾ ಕ್ಷೇತ್ರ ಹೇಗೆ ದೇಶದ ರಕ್ಷಣೆಯಲ್ಲಿ ಪಾತ್ರ ವಹಿಸುತ್ತದೆ ಎಂಬುದನ್ನು ಯುವಕರು ತಿಳಿದುಕೊಳ್ಳಬೇಕು ಎಂದರು.
ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಎಸ್​.ಸಾಳುಂಕಿ ಅಧ್ಯಕ್ಷತೆ ವಹಿಸಿದ್ದರು. ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲಾಯಿತು.
ವಾಯು ಪಡೆ ನಿವೃತ್ತ ಅಧಿಕಾರಿಗಳಾದ ಡಾ.ಸುಭಾಷ ಸುಂಕದ, ಡಾ.ವಿ.ಬಿ.ಸಾವಿರಮಠ, ಡಾ.ಲೊಬೊ, ಇತರರು ಇದ್ದರು.