ಸುಬ್ರಹ್ಮಣ್ಯ: ಕಾರ್ಗಿಲ್‌ನಲ್ಲಿ ನಮ್ಮ ಯೋಧರು ಮಾಡಿದ ಸಾಧನೆ ನಮಗೆಲ್ಲರಿಗೂ ಹೆಮ್ಮೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಭಾರತೀಯ ಸೇನೆಗೆ ಸೇರಿ ಯೋಧರಾಗಿ ದೇಶಸೇವೆ ಮಾಡುವ ಸಂಕಲ್ಪ ಮಾಡಬೇಕಾಗಿದೆ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಹೇಳಿದರು.
ಜೆಸಿಐ ಕಡಬ ಕದಂಬ, ಎಸ್.ಎಸ್.ಪಿ.ಯು ಕಾಲೇಜು ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸುಬ್ರಹ್ಮಣ್ಯ ಆಶ್ರಯದಲ್ಲಿ ಕಾಲೇಜಿನಲ್ಲಿ ಸೋಮವಾರ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗೌರವಾರ್ಪಣೆ: ನಿವೃತ್ತ ಸುಬೇದಾರ್ ವಾಸುದೇವ ಗೌಡ ಬಾನಡ್ಕ, ಯೋಧರಾದ ದಿನೇಶ್ ಕುಲ್ಕುಂದ, ಯತೀಶ್ ಪಳ್ಳಿಗದ್ದೆ ಅವರನ್ನು ಸನ್ಮಾನಿಸಲಾಯಿತು. ಜೆಸಿಐ ಕಡಬ ಕದಂಬದ ಅಧ್ಯಕ್ಷೆ ವಿಶ್ರುತಾ ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸುಬೇದಾರ್ ವಾಸುದೇವ ಗೌಡ ನಡ್ಕ ದಿಕ್ಸೂಚಿ ಭಾಷಣ ಮಾಡಿದರು.
ಪ್ರಾಚಾರ್ಯ ಸೋಮಶೇಖರ್ ನಾಯಕ್, ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ., ಜೇಸಿಸ್ ವಲಯ ನಿರ್ದೇಶಕ ಕಾಶಿನಾಥ್ ಗೋಗಟೆ, ಅತ್ಯುತ್ತಮ ವ್ಯವಹಾರ ಸಾಧಕ ಪುರಸ್ಕಾರ ಪಡೆದ ವಿಜೀತ್ ಶೆಟ್ಟಿ ಮರ್ಧಾಳ, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಆರ್., ಪೂರ್ವಾಧ್ಯಕ್ಷ ಚಂದ್ರಶೇಖರ ನಾಯರ್, ಜೇಸಿಸ್ ಕಾರ್ಯದರ್ಶಿ ನವ್ಯಾಕೃಷ್ಣ, ಕಾರ್ಯಕ್ರಮ ನಿರ್ದೇಶಕ ಕೃಷ್ಣ ಕಾರಂತ್, ಪದಾಧಿಕಾರಿ ಪ್ರಣೀತಾ ಉಪಸ್ಥಿತರಿದ್ದರು.