ಜಿಲ್ಲೆ

ಹೆಮ್ಮೆಯ ಸೈನಿಕರಿಂದಾಗಿ ನಾವೆಲ್ಲ ನಿಶ್ಚಿಂತ, ಸಂಕಲ್ಪ ಶೆಟ್ಟರ್ ಅಭಿಮತ

Dharwada - Basavaraj Idli

ಹುಬ್ಬಳ್ಳಿ: ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ ನಿಶ್ಚಿಂತೆಯಾಗಿ ಬದುಕುತ್ತಿದ್ದೇವೆ ಎಂದರೆ ಇದಕ್ಕೆ ಪ್ರಮುಖ ಕಾರಣ ಈ ದೇಶವನ್ನು ಕಾಯುವ ಹೆಮ್ಮೆಯ ಸೈನಿಕರು ಎಂದು ಎಸ್ಎಸ್ ಶೆಟ್ಟರ್ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್ ಹೇಳಿದರು.

ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ನಗರದ ಗದಗ ರಸ್ತೆ ರಾಮನಗರದಲ್ಲಿರುವ ಎನ್ಸಿಸಿ ಬಟಾಲಿಯನ್ ನಲ್ಲಿ ಶುಕ್ರವಾರ ಸೇವೆ ಸಲ್ಲಿಸುತ್ತಿರುವ ಭಾರತೀಯ ಯೋಧರಿಗೆ ಸಿಹಿ ತಿನ್ನಿಸಿ ಸನ್ಮಾನ ಮಾಡಿ ಅವರು ಮಾತನಾಡಿದರು.

ತಮ್ಮ ಕುಟುಂಬಗಳನ್ನು ಬಿಟ್ಟು ನಮಗಾಗಿ ಹಗಲಿರುಳು ಮಳೆ ಚಳಿ ಎನ್ನದೆ ದೇಶದ ರಕ್ಷಣೆಗಾಗಿ ದುಡಿಯುವ ಯೋಧರ ತ್ಯಾಗ ಬಹು ದೊಡ್ಡದು. ನಮ್ಮ ಹೆಮ್ಮೆಯ ಸೈನಿಕರ ಪರಿಶ್ರಮದ ಲವಾಗಿ 25 ವರ್ಷದ ಹಿಂದೆ ಕಾರ್ಗಿಲ್ ನಲ್ಲಿ ವಿಜಯ ಸಾಧಿಸಿದ್ದೇವೆ ಎಂದರು.

ಎನ್ಸಿಸಿ ಬಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಯೋಧರು, ಫೌಂಡೇಷನ್ ಸಂಯೋಜಕ ಪರಮ್ ಕಿತ್ಲಿ, ಸದಸ್ಯರಾದ ಅಭಿ ಮುಪರ್ಲಾ, ಶಂಕರ, ಮುರುಗೇಶ ಶೆಟ್ಟರ್, ನಂದೀಶ ವಡ್ಡಟ್ಟಿ, ಶಿವು ಕೊಪ್ಪದ, ವಿನೋದ ಬಂಕಾಪುರ, ಮಾಧವನ್, ವಿಕಿ, ಮಂಜು ನಾಗರಾಳ, ಸಿದ್ದು ಪರಣ್ಣವರ, ಮಾಂತೇಶ್ ತಾವರೆ ಇತರರು ಉಪಸ್ಥಿತರಿದ್ದರು.