ಹುಬ್ಬಳ್ಳಿ : ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧರ ಸಾಹಸ, ಶೌರ್ಯ ಸ್ಮರಿಸಿ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಈ ಯುದ್ಧದಲ್ಲಿ ಧಾರವಾಡ ಜಿಲ್ಲೆಯ ಯೋಧರೂ ಪಾಲ್ಗೊಂಡಿದ್ದರು ಎಂಬುದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿ.
ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಧಾರವಾಡ ಜಿಲ್ಲೆಯ ಯೋಧರನ್ನು ಆತ್ಮೀಯವಾಗಿ ಸನ್ಮಾನಿಸುವ ಜತೆಗೆ ಈ ಯುದ್ಧದಲ್ಲಿ ವಿಜಯ ಸಾಧಿಸಿ 25 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಕನ್ನಡದ ನಂ. 1 ಪತ್ರಿಕೆ ‘ವಿಜಯವಾಣಿ’ ವತಿಯಿಂದ ಜು. 28ರಂದು ಸಂಜೆ 4 ಗಂಟೆಗೆ ಹುಬ್ಬಳ್ಳಿ ವಿದ್ಯಾನಗರ ಬಿವಿಬಿ ಕಾಲೇಜ್ ಎದುರಿನ ಶ್ರೀ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ‘ಕಾರ್ಗಿಲ್ ವಿಜಯ ದಿವಸ್ ರಜತ ಮಹೋತ್ಸವ ಸಂಭ್ರಮ’ ಆಯೋಜಿಸಲಾಗಿದೆ.
ಸ್ವರ್ಣಾ ಗ್ರುಪ್ ಆಫ್ ಕಂಪನೀಸ್ ಸಹಯೋಗದಲ್ಲಿ ಏರ್ಪಡಿಸಿರುವ ಈ ಸಮಾರಂಭದ ಮತ್ತೊಂದು ವಿಶೇಷತೆ ಎಂದರೆ, ಜಾಗೋ ಹಿಂದುಸ್ತಾನಿ ಸ್ವರ ನಿನಾದ ತಂಡ. ದೇಶಭಕ್ತಿ ಗೀತೆಗಳನ್ನು ಹಾಡುವ ಈ ತಂಡ, ರಾಷ್ಟ್ರದ ಉದ್ದಕಲಕ್ಕೂ ಪ್ರಸಿದ್ಧಿ ಪಡೆದಿದೆ. ‘ ಮೇರೆ ದೇಶ ಕಿ ಧರತಿ...., ನನ್ನಾ ಮುನ್ನಾ ರಾಹಿ ಹೂ, ದೇಶ ಕಾ ಸಿಪಾಯಿ ಹೂ....ಮೇರಾ ರಂಗ ದೇ ಬಸಂತಿ ಚೋಲಾ..’ದಂತಹ ಹಲವಾರು ದೇಶಭಕ್ತಿಗಳನ್ನು ಈ ತಂಡ ಹಾಡುವುದನ್ನು ಕೇಳುವುದೇ ಅತ್ಯುತ್ತಮ ಅವಕಾಶ. ಎರಡು ತಾಸಿಗೂ ಹೆಚ್ಚು ಸಮಯದವರೆಗೆ ಈ ತಂಡ ಹಾಡುವುದನ್ನು ಕೇಳಿದರೆ, ಸಮಯ ಹೋಗಿದ್ದರ ಅರಿವೇ ಆಗುವುದಿಲ್ಲ.
ಧಾರವಾಡ ಲೋಕಸಭೆ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಘನ ಉಪಸ್ಥಿತಿಯಲ್ಲಿ ಏರ್ಪಡಿಸಿರುವ ಈ ಕಾರ್ಯಕ್ರಮಕ್ಕೆ ಶಾಸಕರಾದ ಮಹೇಶ ಟೆಂಗಿನಕಾಯಿ ಹಾಗೂ ಪ್ರಸಾದ ಅಬ್ಬಯ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸ್ವರ್ಣಾ ಗ್ರುಪ್ ಆಫ್ ಕಂಪನೀಸ್ ಎಂಡಿ ಸಿಎಚ್ ವಿಎಸ್ವಿ ಪ್ರಸಾದ ಅವರು ಅಧ್ಯಕ್ಷತೆ ವಹಿಸುವರು. ಈ ಕಾರ್ಯಕ್ರಮದ ಟ್ರಾವೆಲ್ ಪಾರ್ಟನರ್ ವಿಜಯಾನಂದ ಟ್ರಾವೆಲ್ಸ್ ಹಾಗೂ ರೇಡಿಯೋ ಪಾರ್ಟನರ್ ರೆಡ್ ಎಫ್ಎಂ ಆಗಿದೆ.
ರಾಷ್ಟ್ರದ ಗೌರವಕ್ಕಾಗಿ ವೀರಮರಣವನ್ನಪ್ಪಿದ ನೂರಾರು ಯೋಧರನ್ನು ಸ್ಮರಿಸಿ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಉಚಿತ ಪ್ರವೇಶ ಒದಗಿಸಲಾಗಿದೆ.
ಸೈನಿಕರು, ನಿವೃತ್ತ ಸೈನಿಕರು, ಎನ್ಸಿಸಿ, ಎನ್ಎಸ್ಎಸ್ ಕೆಡೆಟ್ಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ತಮ್ಮ ಸ್ನೇಹಿತರು ಹಾಗೂ ಕುಟುಂಬ ಸಮೇತ ಪಾಲ್ಗೊಂಡು, ರಾಷ್ಟ್ರಭಕ್ತಿ ಸಾರುವ ಈ ಕಾರ್ಯಕ್ರಮಕ್ಕೆ ಮೆರಗು ತರಲಿ.
ಮಾಹಿತಿಗೆ 88844 32301 ಅಥವಾ 88844 32341 ಸಂರ್ಪಸಿ.