ಚಿಕ್ಕೋಡಿ: ಇಲ್ಲಿನ ಸಿಎಲ್‌ಇ ಸಂಸ್ಥೆಯ ಬಿ.ಸಿ.ಗಂಗಾಲ ಶಿಕ್ಷಣ ವಹಾವಿದ್ಯಾಲಯದಲ್ಲಿ ಶುಕ್ರವಾರ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವನ್ನು ಆಚರಿಸಲಾಯಿತು.
ನಿವೃತ್ತ ಸುಬೇದಾರ ಮೇಜರ್ ವಿಜಯ ಈಟಿ ಕಾರ್ಗಿಲ್ ಹೋರಾಟದ ಸಂದರ್ಭ ಕುರಿತು ಮಾತನಾಡಿದರು.
ಸಂಸ್ಥೆಯ ಸಹಕಾರ್ಯದರ್ಶಿ ಎನ್.ಎಸ್.ವಂಟಮುತ್ತೆ, ಮೀನಾಕ್ಷಿ ಕಾಂಬಳೆ, ನಾಗರಾಜ ಜರಳಿ, ಸುಧಾರಾಣಿ ಬಡಿಗೇರ, ಪ್ರಿಯಾಂಕಾ ಕಾಂಬಳೆ, ಕಿರಣ ಕಡಲಗಿ ಮಾತನಾಡಿದರು.
ದೀಪಕ ಹಾವಳೆ, ಎಸ್.ಎಸ್.ಕುಂಬಾರ, ಎಸ್.ಬಿ.ಶಿರಗುಪ್ಪೆ, ಎಸ್.ಎಸ್.ಮಾರಿಹಾಳ, ಆರ್.ಕೆ.ನಾಯಿಕ, ಸರಸ್ವತಿ ಶೇಡಬಾಳೆ ಇತರರಿದ್ದರು. ಸಾವಿತ್ರಿ ಅಕಿವಾಟೆ ಸ್ವಾಗತಿಸಿದರು. ಭರಮಪ್ಪ ಸಣ್ಣಲಗಮಣ್ಣವರ ನಿರೂಪಿಸಿದರು. ಹನಮೇಶ ಮಲ್ಲಿಕಾರ್ಜುನ ವಂದಿಸಿದರು.