ಬೈಲಹೊಂಗಲ: ದೇಶದ ರಣೆ, ಸ್ವಾಭಿಮಾನಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ಕಾರ್ಗಿಲ್ ವೀರಯೋಧರು ಸದಾ ಸ್ಮರಣೀಯರು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದ ಮುರಕಿಬಾವಿ ರಸ್ತೆಯ ಸೈನಿಕರ ಭವನದಲ್ಲಿ ತಾಲೂಕು ಮಾಜಿ ಸೆನಿಕರ ಸಮನ್ವಯ ಸಮಿತಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 26ನೇ ವರ್ಷದ ಕಾರ್ಗಿಲ್ ಆಪರೇಷನ್, ಸಿಂಧೂರ ವಿಜಯೋತ್ಸವ ಹಾಗೂ ಕಿರು ರಂಗಮಂಟಪ ಉದ್ಘಾಟನೆ ಸಮಾರಂಭದ ಅಧ್ಯತೆ ವಹಿಸಿ ಮಾತನಾಡಿದರು. ಹಲವಾರು ಸಂಕಷ್ಟ ಎದುರಿಸಿ ಕಾರ್ಗಿಲ್ ಯುದ್ಧದಲ್ಲಿ ಸೈನಿಕರು ಸೇವೆ ಸಲ್ಲಿಸಿದ್ದು, ಯುವಜನರಿಗೆ ಮಾದರಿ ಎಂದರು.
ತಾಲೂಕು ಮಾಜಿ ಸೈನಿಕರ ಸಮನ್ವಯ ಸಮಿತಿ ಅಧ್ಯ ಬಿ.ಬಿ.ಬೋಗೂರ ಮಾತನಾಡಿ, ರಂಗ ಮಂಟಪ ನಿರ್ಮಿಸಿದ್ದಕ್ಕಾಗಿ ಪ್ರಶಂಸೆ ವ್ಯಕ್ತಪಡಿಸಿದರು. ಮಾಜಿ ಸೈನಿಕರು ಪಟ್ಟಣದಲ್ಲಿ ಬೆಕ್ ರ್ಯಾಲಿ ನಡೆಸಿ ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಾಯಿತು.
ಪುರಸಭೆ ಮಾಜಿ ಅಧ್ಯ ಬಸವರಾಜ ಜನ್ಮಟ್ಟಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯ ಡಾ.ಮಹಾಂತೇಶ ಕಳ್ಳಿಬಡ್ಡಿ, ಉಪಾಧ್ಯ ಚಂದ್ರಶೇಖರ ನೇಸರಗಿ, ಕಾರ್ಯದರ್ಶಿ ಶೇಖರ ನಾವಲಗಟ್ಟಿ, ಖಜಾಂಚಿ ದೇಮಪ್ಪ ಶಿರಗಾಂವಿ, ನಿರ್ದೇಶಕರಾದ ಬಸವರಾಜ ವಕ್ಕುಂದ, ಬಸವರಾಜ ಹೊಳೆಪ್ಪನವರ, ಮುರುಗಯ್ಯ ಪಠಪತಿ, ಟಿ.ಬಿ.ಮಾವಿನಕಟ್ಟಿ, ಬಿ.ಎಸ್.ಹೊಂಗಲ, ಎಸ್.ಜಿ.ಹಡಪದ, ಶಂಕರ ಬೇವಿನ, ಯಲ್ಲಪ್ಪ ಗಡದವರ, ಚಂದ್ರಗೌಡ ಗೌಡರ, ಮಡಿವಾಳಪ್ಪ ಗೋಡಿ, ಮಲ್ಲವ್ವ ಕಾಡನ್ನವರ, ಮಾಜಿ ಸೆನಿಕ ನೀಲಪ್ಪ ಕಲ್ಲೂರ, ಬಿ.ಎ್. ಗುರುನವರ, ರತ್ನಾ ಗೋದಿ ಇತರರಿದ್ದರು.