ಇಳಕಲ್ಲದ ಕರವೇ ವತಿಯಿಂದ ನಗರದ ಎಪಿಎಂಸಿಯಲ್ಲಿರುವ ಅನಧಿಕೃತ ಮನೆಗಳನ್ನು ತೆರವುಗೊಳಿಸಲು ಆಗ್ರಹಿಸಿ ಕರವೇ ಕಾರ್ಯಕರ್ತರು ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. 
ಜಿಲ್ಲೆ

ಕರವೇ ಕಾರ್ಯಕರ್ತರ ಪಾದಯಾತ್ರೆ

Vijayapura - Desk - Gurappa Lokuri

ಇಳಕಲ್ಲ(ಗ್ರಾ): ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪಾದಯಾತ್ರೆ ನಡೆಸಿದರು.
ನಗರದ ಎಸ್.ಆರ್. ಕಂಠಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಚಾಲನೆ ನೀಡಿ ಮಾತನಾಡಿ, ಅನಧಿಕೃತ ಮನೆಗಳನ್ನು ತೆರವುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.
ಕರವೇ ಮುಖ್ಯಸ್ಥ ನ್ಯಾಯವಾದಿ ರಮಜಾನ ನದ್ಾ, ಮಹಾಂತೇಶ ವಂಕಲಕುಂಟಿ, ಅಶೋಕ ಪೂಜಾರಿ , ಹಸನ್ ಕಲಕಬಂಡಿ, ಸಾಗರ ಪಟ್ಟಣಶೆಟ್ಟಿ, ಮಂಜುನಾಥ ಸರೂರ ಮತ್ತು ಪದಾಧಿಕಾರಿಗಳು ಇದ್ದರು.