ತಮಿಳು ನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರವೇ ಜಿಲ್ಲಾ ಘಟಕ ಪದಾಧಿಕಾರಿಗಳು ಶುಕ್ರವಾರ ಕೊಪ್ಪಳದ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕರವೇ ಜಿಲ್ಲಾಧ್ಯಕ್ಷ ಗಿರಿಶಾನಂದ, ಕಳಕಪ್ಪ ಹೂಗಾರ, ಶರಣಯ್ಯ ಹಳೆಮನಿ, ಮಂಜುನಾಥಗೌಡ ಆನೆಗೊಂದಿ, ಪ್ರಕಾಶ ಮನ್ನೇರಾಳ, ವಿಜಯ ಮಾಳಶೆಟ್ಟಿ, ನಿಂಗಪ್ಪ ಮೂಗಿನ್ ಇದ್ದರು. 
ಜಿಲ್ಲೆ

ತಮಿಳುನಾಡಿಗೆ ನೀರು ಬಿಡದಂತೆ ಪ್ರತಿಭಟನೆ

KARAVE PROTEST CAUVERY WATER KOPPAL

ಕೊಪ್ಪಳ: ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಒತ್ತಾಯಿಸಿ ಕರವೇ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ವರ್ಷ ಬರಗಾಲ ಎದುರಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ವಾಡಿಕೆಯಂತೆ ಮಳೆಯಾಗಿಲ್ಲ. 192 ತಾಲೂಕುಗಳು ಬರಪಿಡಿತವಾಗಿವೆ. ಕಾವೇರಿ ಕಣಿವೆ ಭಾಗದಲ್ಲಿ ಪರಿಸ್ಥಿತಿ ತೀವ್ರ ಸ್ವರೂಪ ಪಡೆದಿದೆ.

ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ದಿನ ಕಳೆದಂತೆ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ಕುಡಿಯಲು ನೀರು ಅಭಾವವಾಗುವ ಸಾಧ್ಯತೆ ಇದೆ. ಇಂಥ ಸ್ಥಿತಿಯಲ್ಲಿ ತಮಿಳು ನಾಡಿಗೆ ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ.

ಅದರಂತೆ ಸರ್ಕಾರ ನೀರು ಬಿಡಲು ಮುಂದಾಗಿರುವುದು ಸರಿಯಲ್ಲವೆಂದು ಆಕೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ರಾಜ್ಯದ ರೈತರು ಹಾಗೂ ಸಾರ್ವಜನಿಕರ ಹಿತ ಕಾಯಬೇಕು. ಗಟ್ಟಿ ನಿರ್ಧಾರ ಕೈಗೊಳ್ಳಬೇಕು.

ತಮಿಳು ನಾಡಿಗೆ ನೀರು ಹರಿಸಬಾರದು. ನ್ಯಾಯಾಲಯ ಆದೇಶ ನೆಪ ಹೇಳಿ ಕೈ ಕಟ್ಟಿ ಕೂಡಬಾರದು. ರಾಜ್ಯದ ಜನರ ಹಿತದೃಷ್ಟಿ ಕಾಯಬೇಕು. ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ನೀರು ಬಿಟ್ಟರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆ ತೀವ್ರತೆ ಪಡೆಯುತ್ತಲೇ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿದರು. ಬಳಿಕ ಬಿಡುಗಡೆ ಮಾಡಿದರು. ಕರವೇ ಜಿಲ್ಲಾಧ್ಯಕ್ಷ ಗಿರಿಶಾನಂದ, ಕಳಕಪ್ಪ ಹೂಗಾರ, ಶರಣಯ್ಯ ಹಳೆಮನಿ,

ಮಂಜುನಾಥಗೌಡ ಆನೆಗೊಂದಿ, ಪ್ರಕಾಶ ಮನ್ನೇರಾಳ, ವಿಜಯ ಮಾಳಶೆಟ್ಟಿ, ನಿಂಗಪ್ಪ ಮೂಗಿನ್, ಪ್ರಶಾಂತ, ಹನುಮಪ್ಪ ಕಡೇಮನಿ, ಶಿವಕುಮಾರಗೌಡ, ಚನ್ನಪ್ಪ, ಕುಮಾರಸ್ವಾಮಿ ಇತರರಿದ್ದರು.