ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲು ಕಲ್ಪಿಸುವಂತೆ ಒತ್ತಾಯಿಸಿ ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಶುಕ್ರವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪದಾಧಿಕಾರಿಗಳಾದ ರಾಜೇಶ ಚಿನ್ನೂರು, ನಾಗರಾಜ, ಶಿವರಾಜ ಉಳ್ಳಾಗಡ್ಡಿ, ಇಾರ್ನ್​, ರಾಜಶೇಖರ ಶ್ಯಾಗೋಟಿ ಇದ್ದರು. 
ಜಿಲ್ಲೆ

ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಿ

Kopala - Raveendra V K

ಕೊಪ್ಪಳ: ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಜಾರಿಗೆ ಆಗ್ರಹಿಸಿ ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಶುಕ್ರವಾರ ನಗರದ ತಹಸೀಲ್​ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಕನ್ನಡಿಗರೇ ಸಾರ್ವಭೌಮರಾಗಿರಬೇಕು. ಖಾಸಗಿ ರಂಗಗಳಲ್ಲಿ ಕನ್ನಡಿಗರಿಗೆ ಸರಿಯಾಗಿ ಉದ್ಯೋಗ ದೊರೆಯುತ್ತಿಲ್ಲ. ಸರ್ಕಾರ ಉದ್ಯೋಗ ಮೀಸಲು ಕಲ್ಪಿಸಿ ಆದೇಶಿಸಿದೆ. ಆದರೆ, ಖಾಸಗಿ ಉದ್ದಿಮೆಗಳಿಗೆ ಮಣಿದು ಆದೇಶ ವಾಪಸ್​ ಪಡೆದಿರುವುದು ಸರಿಯಲ್ಲ. ಇದು ಕನ್ನಡಿಗರಿಗೆ ಮಾಡಿದ ಮೋಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣವೇ ಆದೇಶ ಮರು ಜಾರಿ ಮಾಡಬೇಕು. ಸಿ ಮತ್ತು ಡಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲು ಕಲ್ಪಿಸಬೇಕು. ಆದೇಶ ಪಾಲಿಸದ ಉದ್ದಿಮೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಟನೆಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಸಂಟನೆ ಪದಾಧಿಕಾರಿಗಳಾದ ರಾಜೇಶ ಚಿನ್ನೂರು, ನಾಗರಾಜ, ಶಿವರಾಜ ಉಳ್ಳಾಗಡ್ಡಿ, ಇಾರ್ನ್​, ರಾಜಶೇಖರ ಶ್ಯಾಗೋಟಿ ಇತರರಿದ್ದರು.