ಕನ್ನಡಕ್ಕೆ ಅವಹೇಳನ ಮಾಡಿರುವ ತಮಿಳು ನಟ ಕಮಲ್ ವಿರುದ್ಧ ಕ್ರಮ ಜರುಗಿಸುವಂತೆ ರಬಕವಿಯಲ್ಲಿ ತಹಸೀಲ್ದಾರ್ ಗಿರೀಶ ಸ್ವಾದಿಗೆ ಕರವೇ ಗಜಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ಮಾಳು ದುರ್ಗನ್ನವರ, ಮಹಮ್ಮದ ಹುಸೇನ್ ಲೇಂಗ್ರೆ, ಶಹನೂರ ಗೋಲಬಾವಿ, ಕಾಡಪ್ಪ ಜಿರಾಳಿ ಇದ್ದರು. 
ಜಿಲ್ಲೆ

ಕಮಲ್ ಹಾಸನ್ ವಿರುದ್ಧ ಕರವೇ ಗಜಸೇನೆ ಆಕ್ರೋಶ

ರಬಕವಿ-ಬನಹಟ್ಟಿ : ಕನ್ನಡದ ಬಗ್ಗೆ ಹಗುರವಾಗಿ ಮಾತನಾಡಿರುವ ಬಹುಭಾಷಾ ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಕರವೇ ಗಜಸೇನೆ ಜಿಲ್ಲಾಧ್ಯಕ್ಷ ಮಾಳು ದುರ್ಗನ್ನವರ ಒತ್ತಾಯಿಸಿದರು.

ರಬಕವಿಯ ಶಂಕರಲಿಂಗ ದೇವಸ್ಥಾನದ ಹತ್ತಿರ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಸಂಘಟನೆಯಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕನ್ನಡಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಇದನ್ನು ಅರಿತು ಮಾತನಾಡುವುದು ಒಳಿತು ಎಂದರು.

ಸಂಘಟನೆ ಉಪಾಧ್ಯಕ್ಷ ಶಹನೂರ ಗೋಲಬಾವಿ, ಕಾಡಪ್ಪ ಜಿರಾಳಿ, ಶಿವಪ್ಪ ದೊಡಮನಿ, ಪರಶುರಾಮ್ ಬೆಕ್ಕೇರಿ, ಗೋಪಾಲ ಪಾಟೀಲ, ಸಂತೋಷ ರಾವಳ ಇದ್ದರು.