ಮಡಿಕೇರಿ: ಮಂಗಳೂರಿನ ಕುದ್ರೋಳಿಯ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಸೋಮವಾರಪೇಟೆಯ ಕ್ರಿಯೇಟಿವ್ ಅಕಾಡೆಮಿ ಸ್ಕೂಲ್‌ನ ೩ನೇ ತರಗತಿ ವಿದ್ಯಾರ್ಥಿ ಬಿ.ಆರ್.ಹರ್ಷಲ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾನೆ.
ಸೋಮವಾರಪೇಟೆಯ ಬಿ.ಎಸ್.ರೋಹಿತ್ ಹಾಗೂ ಶಿಲ್ಪ ದಂಪತಿಯ ಪುತ್ರ. ಕೊಡಗಿನ ಟ್ರೆಡಿಷನಲ್ ಶೊಟೊಕಾನ್ ಕರಾಟೆ ಅಸೋಸಿಯೇಷನ್‌ನ ತರಬೇತುದಾರ ಎನ್.ಸಿ.ಸುದರ್ಶನ್‌ರವರ ಬಳಿ ಹರ್ಷಲ್ ತರಬೇತಿ ಪಡೆದಿದ್ದಾನೆ.