ಮೂಡುಬಿದಿರೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದಿರೆ ತಾಲೂಕು ದ.ಕ. ಹಾಗೂ ಸೇಂಟ್ ಇಗ್ನೇಷಿಯಸ್ ಶಾಲೆ ಪಾಲಡ್ಕ ಆಶ್ರಯದಲ್ಲಿ ನಡೆದ ಮೂಡುಬಿದಿರೆ ತಾಲೂಕು ಮಟ್ಟದ 17 ವರ್ಷದ ವಯೋಮಿತಿಯ ಬಾಲಕರ ಹಾಗೂ ಬಾಲಕಿಯರ ವಿಭಾಗದ ಕರಾಟೆ ಪಂದ್ಯಾಟದಲ್ಲಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಸಮಗ್ರ ತಂಡ ಪ್ರಶಸ್ತಿ ಪಡೆಯಿತು.
14ರ ವಿಭಾಗದ ಹಾಗೂ 17ರ ವಿಭಾಗದ ಬಾಲಕರ ಹಾಗೂ ಬಾಲಕಿಯರ ಪಂದ್ಯಾಟಗಳಲ್ಲಿ ಒಟ್ಟು ಆರು ಚಿನ್ನ, ಎಂಟು ಬೆಳ್ಳಿ ಹಾಗೂ ಐದು ಕಂಚಿನ ಪದಕ ಶಾಲೆ ಗಳಿಸಿದೆ.
ಭಾಂದವಿ ಸಿ., ಸೌಜನ್ಯ ಪಿ.ಶೇಷಪ್ಪನವರ್, ಎಂ.ಜಿ.ದ್ರುತಿ ಪಟೇಲ್, ದೀಕ್ಷಿತ್ ಬಿ,ಎನ್,, ಜಯಂತ್ ಗೌಡ, ಶ್ರೇಯಸ್ ಸಿ. ಲಿಂಗರಾಜು ಮತ್ತು ವಿ.ಅಕುಲ್ ಸಾಯಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳನ್ನು ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಅಭಿನಂದಿಸಿದ್ದಾರೆ.