ಕಂಪ್ಲಿ: ಸಮೀಪದ ಪಂಪಾವಿದ್ಯಾಪೀಠದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಕರಾಟೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ ಎಂದು ಪ್ರಾಚಾರ್ಯ ಮರಿಯಪ್ಪ ತಳವಾರ ತಿಳಿಸಿದರು.
ಶಾಲೆಯಲ್ಲಿ ಕರಾಟೆಪಟುಗಳಿಗೆ ಸೋಮವಾರ ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ಫೆ.2ರಂದು ಗಂಗಾವತಿಯಲ್ಲಿ ಆಯೋಜಿಸಿದ್ದ 7ನೇ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್ ಕುಮ್ಟಿ, ಕಟಾ ಸ್ಪರ್ಧೆಗಳಲ್ಲಿ ಟಿ.ಇಂಚರಾ, ಭಕ್ತಿಶ್ರೀ, ಹುಲಿಗೆಮ್ಮ(ಪ್ರಥಮ), ವಿ.ಸ್ವಪ್ನಾ, ಸ್ಮತಿ ಧೂಪದ, ಬಿ.ನಂದಿನಿ, ಎಲ್.ಸೇವಂತಿ(ದ್ವಿತೀಯ), ವಿದ್ಯಾಶ್ರೀ, ಶ್ರೇಯಶ್ರೀ, ಮಾನವಿ(ತೃತೀಯ)ಸ್ಥಾನದೊಂದಿಗೆ ಪ್ರಮಾಣಪತ್ರ, ಟ್ರೋಫಿ ಗಳಿಸಿದ್ದಾರೆ ಎಂದರು.
ಕಂಪ್ಲಿಯ ಎಂ.ಕೆ.ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ಮುಖ್ಯತರಬೇತುದಾರರಾದ ಮಹ್ಮದ್‌ಗೌಸ್, ಕೇದಾರನಾಥ ಇವರ ನೇತೃತ್ವದಲ್ಲಿ ಟಿ.ನಿಷಾ, ವಿ.ರಮೇಶ, ನೂರ್ ಕರಾಟೆಪಟುಗಳಿಗೆ ತರಬೇತಿ ನೀಡಿದ್ದರು. ನಿತ್ಯ ಶಾಲೆಯ ಮಕ್ಕಳಿಗೆ ಆತ್ಮರಕ್ಷಣೆ ಕಲೆಯಲ್ಲಿ ಕರಾಟೆ ಬೋಧಿಸುತ್ತಿದ್ದಾರೆ ಎಂದು ತಿಳಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಯಾಕೂಬ್‌ಖಾನ್, ಶಿಕ್ಷಕರಾದ ಗವಿಸಿದ್ದಯ್ಯ, ಶಾರದಾ, ಪಾಲಕ ಧೂಪದ ಪ್ರಶಾಂತ ಇತರರಿದ್ದರು.