ಜಿಲ್ಲೆ

ಕರಾಟೆ ಚಾಂಪಿಯನ್ ಶಿಪ್

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ವಾಸವಿ ಮಹಲ್ ನಲ್ಲಿ ವಿಆರ್ ಎಲ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ವಿಜೇತರಿಗೆ ಭಾನುವಾರ ಸಂಜೆ ಸಮಾರೋಪದಲ್ಲಿ ಬಹುಮಾನ ವಿತರಿಸಲಾಯಿತು.

ಅತಿಥಿಗಳಾದ ನಿಯಾಝ್ ಖತೀಬ್, ಲತಾ, ಮೋಹನ್ ಜೋಗನ್ನವರ್, ಶಿಲ್ಪಾ ಅವರು ಪ್ರಶಸ್ತಿ ವಿತರಿಸಿದರು. ಹ್ಯಾನ್ಸಿ ಅಣ್ಣಪ್ಪ ಮರಕಲ್ ಅಧ್ಯಕ್ಷತೆ ವಹಿಸಿದ್ದರು.

ಸೆನ್ಸಾಯ್ ಶ್ರೀಕಾಂತ ಮಲ್ಲೂರು, ಭಾರ್ಗವ ರೆಡ್ಡಿ, ಸಹ ಸಂಚಾಲಕ ಸಿಹಾನ್ ವಿನೋದ್ ಭಾಂಡಗೆ ಮತ್ತು ಸೆನ್ಸಾಯ್ ವಿವೇಕ್ ಅಣವೆಕರ್, ಆನಂದ ಮರಕಲ್, ಖುಷ್ಬು ಜೈನ್, ಲಾವಣ್ಯ, ತೇಜೇಶ್ವಿನಿ, ಭರತ್, ರಾಚಪ್ಪ ಅಂಗಡಿ, ಅಲೆಕ್ಸ, ರಾಘವೇಂದ್ರ ದಂತಿ, ಕಿರಣ, ಗಂಗಾಧರ ಇದ್ದರು.