ಜಿಲ್ಲೆ

ಚನ್ನಗಿರಿ ಹುಡುಗ್ರು ಕರಾಟೆಯಲ್ಲಿ ಚಾಂಪಿಯನ್

ಹರ್ಷ ನ.ಪುರೋಹಿತ

ಚನ್ನಗಿರಿ: ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಮಂಗಳವಾರ ನಡೆದ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ತಾಲೂಕಿನ ವಿದ್ಯಾರ್ಥಿಗಳಾದ ಎಚ್.ಡಿ. ಚಿನ್ಮಯಾ, ಎಚ್.ಡಿ. ಮನಮೋಹನ್ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ.

ಚಿನ್ಮಯಾ ದೇವರಹಳ್ಳಿ ನವೋದಯ ಶಾಲೆಯಲ್ಲಿ 9 ನೇ ತರಗತಿ ವಿದ್ಯಾರ್ಥಿಯಾಗಿದ್ದರೆ, ಮನಮೋಹನ್ ಅಜ್ಜಿಹಳ್ಳಿ ಗ್ರಾಮದ ತರಳಬಾಳು ಶಾಲೆಯ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

9 ಹಾಗೂ 5 ನೇ ತರಗತಿ ವಿಭಾಗದಲ್ಲಿ ಕರಾಟೆಯ ಕಟಾ ಹಾಗೂ ಕುಮಟಿ ಎರಡೂ ವಿಭಾಗಗಳಲ್ಲಿ ಇಬ್ಬರೂ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾರೆ.