ಜಿಲ್ಲೆ

ಕರಾಟೆ ಪಂದ್ಯದಲ್ಲಿ 30 ವಿದ್ಯಾರ್ಥಿಗಳಿಗೆ ಪದಕ

ಎ. ಆರ್. ರಘುರಾಮ

ಚನ್ನರಾಯಪಟ್ಟಣ : ಮುಂಬೈನಲ್ಲಿ ಆಯೋಜಿಸಿದ್ದ ಏಷ್ಯನ್ ಕಪ್ ಇಂಟರ್‌ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಚನ್ನರಾಯಪಟ್ಟಣದ ಬ್ಲೂ ಡ್ರ್ಯಾಗನ್ ಕರಾಟೆ ಮತ್ತು ಸ್ಪೋಟ್ಸ್ ಅಕಾಡೆಮಿಯ 30 ವಿದ್ಯಾರ್ಥಿಗಳು 51 ಪದಕ ಗಳಿಸಿರುವುದು ಶ್ಲಾಘನೀಯ ಎಂದು ಪುರಸಭಾ ಸದಸ್ಯ ಸಿ.ಎನ್. ಶಶಿಧರ ಹೇಳಿದರು. ಸಾಧಕ ವಿದ್ಯಾರ್ಥಿಗಳಿಗೆ ಕರಾಟೆ ಆಕಾಡೆಮಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. 21 ಚಿನ್ನದ ಪದಕ, 15 ಬೆಳ್ಳಿ ಪದಕ, ಹಾಗೂ 17 ಕಂಚಿನ ಪದಕ ವಿಜೇತರಾಗಿ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಚನ್ನರಾಯಪಟ್ಟಣ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದರು. ಕರಾಟೆ ಅಕಾಡೆಮಿಯ ಮುಖ್ಯಸ್ಥ ಗಣೇಶ್ ಕುಂದಾಪುರ ಮಾತನಾಡಿ, ಟೀಮ್ ಇಂಡಿಯಾ ಕೋಚ್‌ಗಳನ್ನು ಕರೆಸಿ ನಮ್ಮ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತರಬೇತಿ ಶಿಬಿರ ಆಯೋಜಿಸುವ ಗುರಿ ಇದೆ ಎಂದರು. ಸಾಧಕ 30 ವಿದ್ಯಾರ್ಥಿಗಳನ್ನು ಕರಾಟೆ ಆಕಾಡೆಮಿಯಿಂದ ಸನ್ಮಾನಿಸಲಾಯಿತ್ತು.