ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ಗುರುಪೀಠದಲ್ಲಿ ಜರುಗುವ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಸಚಿವ ಶಿವರಾಜ ತಂಗಡಗಿ ಬುಧವಾರ 51 ಕ್ವಿಂಟಾಲ್ ಅಕ್ಕಿಯನ್ನು ಕಾರಟಗಿಯಿಂದ ಕಳುಹಿಸಿಕೊಟ್ಟರು. ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಕೆ.ಎನ್. ಪಾಟೀಲ್, ತಾಲೂಕು ಅಧ್ಯಕ್ಷ ಗಿರಿಯಪ್ಪ ಬೂದಿ, ಪ್ರಧಾನ ಕಾರ್ಯದರ್ಶಿ ಸೋಮನಾಥ್ ಇತರರಿದ್ದರು.  
ಜಿಲ್ಲೆ

ವಾಲ್ಮೀಕಿ ಜಾತ್ರೆಗೆ 51 ಕ್ವಿಂಟಾಲ್ ಅಕ್ಕಿ ದೇಣಿಗೆ

ಕಾರಟಗಿ: ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ಗುರುಪೀಠದಲ್ಲಿ ಫೆ.8, 9ರಂದು ಜರುಗುವ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಸಚಿವ ಶಿವರಾಜ ತಂಗಡಗಿ ಪಟ್ಟಣದಿಂದ ಬುಧವಾರ 51 ಕ್ವಿಂಟಾಲ್ ಅಕ್ಕಿ ದೇಣಿಗೆ ನೀಡಿದರು.

ಬಳಿಕ ಮಾತನಾಡಿ, ವಾಲ್ಮೀಕಿ ಜಾತ್ರೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ನಾನು ಸಹ 8 ರಂದು ಜಾತ್ರೆಯಲ್ಲಿ ಭಾಗವಹಿಸುತ್ತೇನೆ. ಎಲ್ಲರೂ ಒಗ್ಗಟ್ಟಿನಿಂದ ಜಾತ್ರೆ ನಡೆಸಬೇಕು. ನನ್ನ ಕ್ಷೇತ್ರದಿಂದಲೂ ಅಪಾರ ಸಂಖ್ಯೆಯ ಜನರು ಈ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಜನರು ಭಾಗವಹಿಸುವ ಮೂಲಕ ಜಾತ್ರೆ ಯಶಸ್ವಿಗೊಳಿಸಬೇಕು ಎಂದರು.

ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ಡಾ. ಕೆ.ಎನ್. ಪಾಟೀಲ್, ತಾಲೂಕು ಅಧ್ಯಕ್ಷ ಗಿರಿಯಪ್ಪ ಬೂದಿ, ಪ್ರಧಾನ ಕಾರ್ಯದರ್ಶಿ ಸೋಮನಾಥ್, ಹೆಬ್ಬಾಳು ಮುಖಂಡರಾದ ಸುರೇಶ್ ಬೆಳ್ಳಿಕಟ್ಟಿ, ಸೋಮನಾಥ ದೊಡ್ಡಮನಿ, ರಾಘವೇಂದ್ರ ಹಾಗೇದಾಳ, ದೇವರಾಜ್, ಜೂರಟಗಿ, ಸೋಮಶೇಖರ್ ಗ್ಯಾರೇಜ್, ಹನುಮೇಶ್ ಗುರಿಕಾರ್, ದುರ್ಗೇಶ್ ಪ್ಯಾಟಾಳ, ಮೂಕಪ್ಪ ನಾಯಕ್, ಶರಣಪ್ಪ ಚಾಗಿ, ಯಮನೂರ ಸೋಮನಾಳ, ದುರ್ಗಪ್ಪ ನರೇರ್, ಬಸವರಾಜ್ ಹಾಲುಸಮುದ್ರ, ಶಿವರಾಜ್ ನವಲಿ, ಲಿಂಗೇಶ್ ಕಲ್ಗುಡಿ, ಈರಣ್ಣ ಈಳಿಗೇರ್, ಹುಲುಗಪ್ಪ ಪಾಳೆ ಉಳೇನೂರು ಸೇರಿ ಇತರರಿದ್ದರು.