ಕಾರಟಗಿ ತಾಲೂಕಿನ ಸಿದ್ದಾಪುರದಲ್ಲಿ ಸೈನಿಕನಾಗಿ ಆಯ್ಕೆಯಾಗಿರುವ ಜಂಭಣ್ಣ ಅವರನ್ನು ಶಾಲಾ ಶಿಕ್ಷಕ ವೃಂದ ಹಾಗೂ ಎಸ್ಡಿಎಂಸಿ ಸದಸ್ಯರು ಸನ್ಮಾನಿಸಿದರು. ಶಿಕ್ಷಕರಾದ ಗೌರಮ್ಮ, ಶರಣಪ್ಪ ಮೇಟಿ, ಜಯಶ್ರೀ, ಪುಷ್ಪಾವತಿ, ಶ್ರೀದೇವಿ, ಮಂಗಮ್ಮ, ಎಸ್ಡಿಎಂಸಿ ಅಧ್ಯಕ್ಷ ಉಮೇಶ ವಿಭೂತಿ, ಉಪಾಧ್ಯಕ್ಷ ಚಂದ್ರಮ್ಮ, ಗ್ರಾಪಂ ಸದಸ್ಯ ಹನುಮಂತಪ್ಪ, ಹೊನ್ನೂರಪ್ಪ ಇದ್ದರು.  
ಜಿಲ್ಲೆ

ಸಾಧನೆಗೆ ನಿರಂತರ ಅಭ್ಯಾಸ ಅಗತ್ಯ

ಕುರುವತ್ತಿ ಶ್ರೀಕಾಂತಪ್ಪ

ಕಾರಟಗಿ: ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಕಲಿತು ಈಗ ಸೈನಿಕನಾಗಿ ಸೇವೆ ಸಲ್ಲಿಸಲು ನಾಗಾಲ್ಯಾಂಡ್‌ಗೆ ತೆರಳುತ್ತಿರುವ ತಾಲೂಕಿನ ಸಿದ್ದಾಪುರ ನಿವಾಸಿ, ಅಲೆಮಾರಿ ಸಮುದಾಯದ ಜಂಭಣ್ಣ ಅವರನ್ನು ಶಾಲೆ ಹಾಗೂ ಎಸ್ಡಿಎಂಸಿಯಿಂದ ಗುರುವಾರ ಗೌರವಿಸಲಾಯಿತು.

ಶಾಲೆಯ ಮುಖ್ಯಶಿಕ್ಷಕ ಶಾಂತಲಿಂಗಯ್ಯ ಮಸ್ಕಿಮಠ ಮಾತನಾಡಿ, ಸಾಧನೆ ಸಾಧಕನ ಸ್ವತ್ತೇ ಹೊರತು, ಸೋಮಾರಿಯ ಸ್ವತ್ತಲ್ಲ. ಜೀವನದಲ್ಲಿ ಯಶಸ್ಸು ಗಳಿಸಲು ಸತತ ಪರಿಶ್ರಮ, ನಿರಂತರ ಅಭ್ಯಾಸ ಅಗತ್ಯ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರ ಮಧ್ಯೆ ಈ ಹುಡುಗ ಸಾಧನೆ ಮಾಡಿ ತೋರಿಸಿದ್ದಾನೆ.

ಅದರಲ್ಲೂ ದೇಶ ಸೇವೆಗೆ ತೆರಳಿತ್ತಿರುವುದು ಗ್ರಾಮವೇ ಹೆಮ್ಮೆ ಪಡುವ ವಿಷಯ ಎಂದರು. ಶಿಕ್ಷಕರಾದ ಗೌರಮ್ಮ, ಶರಣಪ್ಪ ಮೇಟಿ, ಜಯಶ್ರೀ, ಪುಷ್ಪಾವತಿ, ಶ್ರೀದೇವಿ, ಮಂಗಮ್ಮ, ಎಸ್ಡಿಎಂಸಿ ಅಧ್ಯಕ್ಷ ಉಮೇಶ ವಿಭೂತಿ, ಉಪಾಧ್ಯಕ್ಷ ಚಂದ್ರಮ್ಮ, ಗ್ರಾಪಂ ಸದಸ್ಯ ಹನುಮಂತಪ್ಪ, ಹೊನ್ನೂರಪ್ಪ ಕಾಡಸಿದ್ಧ ಹಾಗೂ ವಿದ್ಯಾರ್ಥಿಗಳಿದ್ದರು.