ಕಾರಟಗಿ: ಪ್ರಯಾಗ್‌ರಾಜ್ ಮಹಾಕುಂಭ ಮೇಳಕ್ಕೆ ತೆರಳಿದ್ದ ತಾಲೂಕಿನ ಸಿದ್ದಾಪುರದ ಪ್ರವೀಣ ಹೊಸಮನಿ (27) ಉತ್ತರ ಪ್ರದೇಶದ ಗೋರಕ್‌ಪುರದಲ್ಲಿ ಸಾವಿಗೀಡಾಗಿದ್ದು, ಬುಧವಾರ ಘಟನಾ ಸ್ಥಳಕ್ಕೆ ತಹಸೀಲ್ದಾರ್ ಎಂ.ಕುಮಾರಸ್ವಾಮಿ ನೇತೃತ್ವದ ತಂಡ ಹೋಗಿದೆ. ಮೃತದೇಹವನ್ನು ರಾಜ್ಯಕ್ಕೆ ತರುವ ಸಂಬಂಧ ಅಲ್ಲಿನ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸುತ್ತಿದ್ದಾರೆ. ಮೃತದೇಹವನ್ನು ರಾಜ್ಯಕ್ಕೆ ತರಲು ಅನೇಕ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿದೆ. ಬುಧವಾರ ನಾನಾ ಪ್ರಕ್ರಿಯೆಗಳು ಮುಕ್ತಾಯವಾಗದ ಕಾರಣ ಅಧಿಕಾರಿಗಳು ಗೋರಕ್‌ಪುರದಲ್ಲಿ ತಂಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಯ ಜತೆ ಮೃತರ ಕುಟುಂಬದ ಸದಸ್ಯರೊಬ್ಬರು ಇದ್ದಾರೆ.