ಕಾರಟಗಿಯ ಹೊರವಲಯದಲ್ಲಿ ಹೆದ್ದಾರಿ ಬದಿಗಳಲ್ಲಿ ನಾಮಫಲಕ ಅಳವಡಿಸುತ್ತಿರುವುದು. 
ಜಿಲ್ಲೆ

ಎನ್.ಎಚ್-23ರಲ್ಲಿ ನಾಮಫಲಕ ಅಳವಡಿಕೆ

ಕಾರಟಗಿ: ಪಟ್ಟಣದ ಹೊರ ವಲಯದಲ್ಲಿ ಹೆದ್ದಾರಿ ಬಳಿ ಟೋಲ್ ಗೇಟ್ ಸಿಬ್ಬಂದಿ ನಾಮಫಲಕ ಅಳವಡಿಕೆ ಕಾರ್ಯಕ್ಕೆ ಗುರುವಾರ ಮುಂದಾಗಿದ್ದಾರೆ.

ತಾಲೂಕು ಕೇಂದ್ರದಿಂದ ಹೈದ್ರಾಬಾದ್ ಹಾಗೂ ಹುಬ್ಬಳ್ಳಿಗೆ ರಾಜ್ಯ ಹೆದ್ದಾರಿ ಎಸ್. ಎಚ್ 23 ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ನಿತ್ಯ ಸಾವಿರಾರು ವಾಹನಗಳು ಈ ರಸ್ತೆ ಮಾರ್ಗವಾಗಿ ಸಂಚರಿಸುತ್ತವೆ. ಸುಗಮ ಸಂಚಾರಕ್ಕೆ ಮಾಹಿತಿ ಒದಗಿಸುವ ನಾಮಫಲಕಗಳಿದ್ದಿಲ್ಲ. ಹಾಗೂ ವಿವಿಧ ಸಮಸ್ಯೆಗಳ ಕುರಿತು ವಿಜಯವಾಣಿ ಪತ್ರಿಕೆ ಫೆ.25 ರಂದು ‘ಹೆದ್ದಾರಿ ಅಧ್ವಾನ ಅಪಘಾತ ಹೆಚ್ಚಳ’ ಎನ್ನುವ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿತ್ತು.

ಹೆದ್ದಾರಿ ರಸ್ತೆ ನಿರ್ವಹಣೆ ಮಾಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಟೋಲ್ ಗೇಟ್ ಸಿಬ್ಬಂದಿ ಈಗ ಹೆದ್ದಾರಿಯಲ್ಲಿ ನಾನಾ ಮಾಹಿತಿ ಒಳಗೊಂಡ ನಾಮಫಲಕ ಅಳವಡಿಕೆ ಕಾರ್ಯಕ್ಕೆ ಮುಂದಾಗಿದ್ದಾರೆ.