ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಪಂನ 2025-26ನೇ ಸಾಲಿನ ನರೇಗಾ ಕ್ರಿಯಾಯೋಜನೆ ತಯಾರಿಕೆ ಗ್ರಾಮಸಭೆಯಲ್ಲಿ ಪಿಡಿಒ ವೆಂಕಟೇಶ್ ನಾಯಕ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ದೇವಮ್ಮ ಸುರೇಶ್ ಬೆಳ್ಳಿಕಟ್ಟಿ, ಉಪಾಧ್ಯಕ್ಷ ಭೀಮನಗೌಡ ಜುಟ್ಲಾದ್, ಸದಸ್ಯರಾದ ಶ್ರೀಧರ ಗೋನಾಳ್, ಮೈಬೂಬ್ ಜಮದಾರ, ಷಣ್ಮುಖಪ್ಪ ಎನ್, ಭೀಮಮ್ಮ ತಳವಾರ ಇದ್ದರು.  
ಜಿಲ್ಲೆ

ನರೇಗಾ ಯೋಜನೆ ಸದ್ಬಳಕೆ ಮಾಡಿಕೊಳ್ಳಿ, ಪಿಡಿಒ ವೆಂಕಟೇಶ ನಾಯಕ ಸಲಹೆ

ಕಾರಟಗಿ: ಸಾರ್ವಜನಿಕರು ನರೇಗಾ ಯೋಜನೆಯಡಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳ ಸದುಪಯೋಗ ಪಡೆಯುವಂತೆ ಗ್ರಾಪಂ ಪಿಡಿಒ ವೆಂಕಟೇಶ್ ನಾಯಕ ತಿಳಿಸಿದರು.

ತಾಲೂಕಿನ ಬೂದಗುಂಪಾ ಗ್ರಾಪಂನ 2025-26ನೇ ಸಾಲಿನ ನರೇಗಾ ಕ್ರಿಯಾಯೋಜನೆ ತಯಾರಿಸಲು ಇತ್ತೀಚೆಗೆ ಹಮ್ಮಿಕೊಂಡಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿದರು. ಜನರು ನರೇಗಾ ಯೋಜನೆ ಮೂಲಕ ಅನೇಕ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿ ಕೈಗೊಳ್ಳಬಹುದಾಗಿದೆ. ಅರ್ಹ ಕುಟುಂಬಗಳಿಗೆ ದಿನಕ್ಕೆ 349 ರೂ. ಕೂಲಿಯಂತೆ ವರ್ಷದಲ್ಲಿ 100 ದಿನ ಕೆಲಸ ಒದಗಿಸಲಾಗುವುದು ಎಂದು ತಿಳಿಸಿದರು.

ತಾಪಂ ಐಇಸಿ ಸಂಯೋಜಕ ಸೋಮನಾಥ ಮಾತನಾಡಿ, ನರೇಗಾ ಯೋಜನೆ ಕೂಲಿಕಾರರ ಜೀವನಕ್ಕೆ ಭದ್ರತೆ ಒದಗಿಸಿದೆ. ಬಡ ಹಾಗೂ ಮಧ್ಯಮ ವರ್ಗದವರಿಗೆ ಇದರಿಂದ ಸಾಕಷ್ಟು ಅನುಕೂಲವಾಗಿದೆ ಎಂದರು.

ಸಹಾಯಕ ತೋಟಗಾರಿಕೆ ಅಧಿಕಾರಿ ವಿನಾಯಕ, ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನ ಮಾಡಿಕೊಳ್ಳುವ ನರೇಗಾ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು. ನಂತರ ಗ್ರಾಪಂ ಪಿಡಿಒಗಳು, ಮೂರೂ ಗ್ರಾಮಗಳಿಂದ ಮನೆ-ಮನೆ ಭೇಟಿ ಹಾಗೂ ವಾರ್ಡ್ ಸಭೆಯಲ್ಲಿ ಬಂದಂತಹ ಬೇಡಿಕೆ ಅರ್ಜಿಗಳನ್ನು ಓದಿ ಹೇಳಿದರು.

ಗ್ರಾಪಂ ಅಧ್ಯಕ್ಷೆ ದೇವಮ್ಮ ಸುರೇಶ್ ಬೆಳ್ಳಿಕಟ್ಟಿ, ಉಪಾಧ್ಯಕ್ಷ ಭೀಮನಗೌಡ ಜುಟ್ಲಾದ್, ಸದಸ್ಯರಾದ ಶ್ರೀಧರ ಗೋನಾಳ್, ಮೈಬೂಬ್ ಜಮದಾರ, ಷಣ್ಮುಖಪ್ಪ ಎನ್, ಭೀಮಮ್ಮ ತಳವಾರ, ಮೌಲಾಬಿ ದೊಡ್ಡಮನಿ, ಗ್ರಾಪಂ ಸಿಬ್ಬಂದಿ ರಾಮಣ್ಣ, ಬಸವರಾಜ್, ಬಸನಗೌಡ, ಪೂಜಾ, ಅಂಗನವಾಡಿ-ಆಶಾ ಕಾರ್ಯಕರ್ತೆಯರು, ಸ್ವಸಹಾಯ ಗುಂಪಿನ ಸದಸ್ಯರು, ನರೇಗಾ ಕಾಯಕ ಬಂಧುಗಳು ಇದ್ದರು.