ಕಾರಟಗಿಯಲ್ಲಿ ಬಿಜೆಪಿ ಪದಾಧಿಕಾರಿಗಳು ಕಾಶ್ಮೀರದಲ್ಲಿ ಉಗ್ರರಿಂದ ಹತರಾದವರಿಗೆ ಮೇಣದ ಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು. ಪದಾಧಿಕಾರಿಗಳಾದ ಮಂಜುನಾಥ ಮಸ್ಕಿ, ಅಮರೇಶ್ ಪಾಟೀಲ್, ಹನುಮಂತಪ್ಪ, ಸತ್ಯನಾರಾಯಣ, ಪ್ರಿಯಾಂಕಾ, ಮಂಜುನಾಥ, ಶರಣಬಸವ ಇತರರಿದ್ದರು.  
ಜಿಲ್ಲೆ

ಭಯಮುಕ್ತ ವಾತಾವರಣ ನಿರ್ಮಾಣವಾಗಲಿ

ಕುರುವತ್ತಿ ಶ್ರೀಕಾಂತಪ್ಪ

ಕಾರಟಗಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿ ಖಂಡಿಸಿ ಹಾಗೂ ಮೃತರಿಗೆ ಶಾಂತಿಕೋರಿ ಪಟ್ಟಣದಲ್ಲಿ ಬಿಜೆಪಿ ಪದಾಧಿಕಾರಿಗಳು ಬುಧವಾರ ರಾತ್ರಿ ಮೌನಾಚರಣೆ ನಡೆಸಿದರು.

ಮೊದಲಿನಿಂದಲೂ ಪಾಕಿಸ್ತಾನ ಇಂತಹ ಕೃತ್ಯಗಳನ್ನು ಬೆಂಬಲಿಸುತ್ತಾ ಬಂದಿದೆ. ಈ ಹಿಂದೆ ಇಂತಹ ಅನೇಕ ಕೃತ್ಯಗಳ ಹೊಣೆಯನ್ನು ಅಲ್ಲಿನ ನಾನಾ ಸಂಘಟನೆಗಳು ಹೊತ್ತುಕೊಂಡಿವೆ. ಜಮ್ಮ-ಕಾಶ್ಮೀರ ಯಾವತ್ತಿಗೂ ಭಾರತದ ಅವಿಭಾಜ್ಯ ಅಂಗ. ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಉಗ್ರರು ರಕ್ಕಸತನ ಮೆರೆದಿದ್ದಾರೆ.

ಕೇಂದ್ರ ಸರ್ಕಾರ ಉಗ್ರರ ಹೆಡೆಮುರಿ ಕಟ್ಟಲು ಅಗತ್ಯ ಕ್ರಮವಹಿಸಬೇಕು. ಭಗವಂತ ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಮುಂದಿನ ದಿನಗಳಲ್ಲಿ ಭಯ ಹಾಗೂ ಭಯೋತ್ಪಾದನೆ ರಹಿತ ವಾತಾವರಣ ನಿರ್ಮಾಣವಾಗಲಿ ಎಂದರು.

ಇದಕ್ಕೂ ಮುನ್ನ ಪದಾಧಿಕಾರಿಗಳು ಮೃತರಿಗೆ ಶಾಂತಿ ಕೋರಿ ಮೇಣದ ಬತ್ತಿ ಬೆಳಗಿ ಶ್ರದ್ಧಾಂಜಲಿ ಅರ್ಪಿಸಿದರು. ಪದಾಧಿಕಾರಿಗಳಾದ ಮಂಜುನಾಥ ಮಸ್ಕಿ, ಅಮರೇಶ್ ಪಾಟೀಲ್, ಹನುಮಂತಪ್ಪ, ಸತ್ಯನಾರಾಯಣ, ಪ್ರಿಯಾಂಕಾ, ಮಂಜುನಾಥ, ಶರಣಬಸವ ಇದ್ದರು.