ಕಾರಟಗಿ ಪದವಿ ಪೂರ್ವ ಕಾಲೇಜಿನಲ್ಲಿ ಆದರ್ಶ ಕಾಲೇಜು ಯೋಜನೆಯಡಿ ನಿರ್ಮಾಣವಾಗಿರುವ ಆಧುನಿಕ ಕಂಪ್ಯೂಟರ್ ಲ್ಯಾಬ್ ಅನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ನೇಮಿಸಿದ ತಜ್ಞರ ತಂಡ ಪರಿಶೀಲಿಸಿತು. ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಜಿ.ಎಚ್. ಜಗದೀಶ್, ಪ್ರಾಚಾರ್ಯ ಶರಣಪ್ಪ ಬೇಲೇರಿ, ಉಪನ್ಯಾಸಕರಾದ ಎಂ.ಎಂ. ಖಾಜಿ, ವಿದ್ಯಾಧರ, ಮಿಲಿಂದಕುಮಾರ್ ಇದ್ದರು.  
ಜಿಲ್ಲೆ

ಆಧುನಿಕ ಲ್ಯಾಬ್‌ಗಳು ವಿದ್ಯಾರ್ಥಿಗಳಿಗೆ ಸಹಕಾರಿ

ಕಾರಟಗಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆದರ್ಶ ಕಾಲೇಜು ಯೋಜನೆಯಡಿ ನಿರ್ಮಾಣವಾಗಿರುವ ಆಧುನಿಕ ಕಂಪ್ಯೂಟರ್ ಲ್ಯಾಬ್ ಅನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ನೇಮಿಸಿದ ತಜ್ಞರ ತಂಡ ಬುಧವಾರ ಭೇಟಿ ನೀಡಿ ಪರಿಶೀಲಿಸಿತು.

ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಎಚ್. ಜಗದೀಶ್ ನೇತೃತ್ವದಲ್ಲಿ ಪ್ರಾಚಾರ್ಯ ಶರಣಪ್ಪ ಬೇಲೇರಿ, ಉಪನ್ಯಾಸಕರಾದ ಎಂ.ಎ. ಖಾಜಿ, ವಿದ್ಯಾಧರ, ಮಿಲಿಂದಕುಮಾರ್ ಅವರ ತಂಡ ಪಿಯು ಕಾಲೇಜಿನಲ್ಲಿ ನಿರ್ಮಾಣಗೊಂಡಿರುವ ಕಂಪ್ಯೂಟರ್ ಪ್ರಯೋಗಾಲಯದ ಭೌತಿಕ ಸೌಲಭ್ಯಗಳನ್ನು ಪರಿಶೀಲಿಸಿತು. ತಂಡಕ್ಕೆ ಕಾಲೇಜು ಪ್ರಾಚಾರ್ಯ ಅನಿಲಕುಮಾರ್ ಮಾಹಿತಿ ನೀಡಿದರು.

ತಂಡದ ನೇತೃತ್ವ ವಹಿಸಿದ್ದ ಜಿ.ಎಚ್. ಜಗದೀಶ್ ಮಾತನಾಡಿ, 2023ರ ಡಿಸೆಂಬರ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಆಯ್ದ 60 ತಾಲೂಕುಗಳಲ್ಲಿನ ವಿಜ್ಞಾನ ಸಂಯೋಜನೆ ಹೊಂದಿರುವ ಸರ್ಕಾರಿ ಪಿಯು ಕಾಲೇಜುಗಳನ್ನು ಆದರ್ಶ ಪಿಯು ಕಾಲೇಜುಗಳನ್ನಾಗಿ ಪರಿವರ್ತಿಸಲು ತೀರ್ಮಾನಿಸಲಾಗಿತ್ತು. ಕಾರಟಗಿ ಸೇರಿ ಜಿಲ್ಲೆಯ ಐದು ಕಾಲೇಜುಗಳು ಆದರ್ಶ ಕಾಲೇಜುಗಳಾಗಿ ಮೇಲ್ದರ್ಜೆಗೆರಿವೆ. ಇಲ್ಲಿ ಆಧುನಿಕ ಪ್ರಯೋಗಾಲಯ, ತಂತ್ರಜ್ಞಾನ ಆಧಾರಿತ ಬೋಧನಾ ಪರಿಕರಗಳನ್ನು ಒದಗಿಸಿ ವಿದ್ಯಾರ್ಥಿಗಳನ್ನು ಐಐಟಿ, ವೈದ್ಯಕೀಯ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅಣಿ ಮಾಡಲಾಗುತ್ತಿದೆ ಎಂದರು.

ಉಪನ್ಯಾಸಕರಾದ ಸಂಗಮೇಶ ಡಿ, ಚಂದ್ರಿಕಾ ಎಂ, ನಾಗರಾಜ್, ಪೆದ್ದ ಸುಬ್ಬಣ್ಣ, ಶಿವಕುಮಾರ್, ಚನ್ನಬಸವ, ನಿವೃತ್ತ ಉಪನ್ಯಾಸಕ ಮಹಾಬಲೇಶ್ವರ್, ಶ್ರೀನಿವಾಸ್ ಇದ್ದರು.