ಕಾರಟಗಿ: ತಾಲೂಕಿನ ಚೆಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ 2020-21ರಲ್ಲಿ ಅನುಷ್ಠಾನ ಮಾಡಲಾದ ಭಾರತ್ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾದ ದೂರು ಆಧಾರಿಸಿ ಜಿಪಂ ನರೇಗಾ ನಿರ್ದೇಶಕ, ಚೆಳ್ಳೂರು ಗ್ರಾಪಂ ಸದಸ್ಯರು ಹಾಗೂ ಹಿಂದಿನ ಪಿಡಿಒ ಭಾಗ್ಯೇಶ್ವರಿ ವಿರುದ್ಧ ಕ್ರಮವಹಿಸಲಾಗಿದೆ. ಆದರೆ, ಈ ಬಗ್ಗೆ ಮಾಹಿತಿ ಕೇಳಿದರೆ ತಾಪಂ ಇಒ ನೀಡುತ್ತಿಲ್ಲ ಎಂದು ದೂರುದಾರ ತಿಪ್ಪಣ್ಣ ಮಡಿವಾಳರ ಆರೋಪಿಸಿದ್ದಾರೆ.
ಶಿಸ್ತು ಕ್ರಮದ ಬಗ್ಗೆ ಈಗಾಗಲೇ ತಾಪಂ ಕಚೇರಿಗೆ ಜಿಪಂ ನರೇಗಾ ನಿರ್ದೇಶಕರು ಪತ್ರ ವ್ಯವಹಾರ ನಡೆಸಿದ್ದಾರೆ. ಪಿಡಿಒ ವಿರುದ್ಧ ಶಿಸ್ತು ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ತಾಪಂ ಕಚೇರಿಗೆ ಪತ್ರದ ಮೂಲಕ ಕೋರಲಾಗಿದೆ. ಆದರೂ, ಸಹ ಮಾಹಿತಿ ನೀಡಲು ತಾಪಂ ಇಒ ಲಕ್ಷ್ಮೀದೇವಿ ಸಿದ್ಧರಿಲ್ಲ. ನೀವು ಜಿಪಂ ಕಚೇರಿಯಿಂದಲೇ ಮಾಹಿತಿ ಪಡೆಯಿರಿ ಎನ್ನುತ್ತಿದ್ದಾರೆ. ದೂರುದಾರರಿಗೆ ಮಾಹಿತಿ ನೀಡದೆ ಅದನ್ನು ಮುಚ್ಚಿಡುವ ಪ್ರಮಯ ಏನಿದೆ ಎಂದು ಅಸಮಾಧಾನ ಹೊರಹಾಕಿದರು.
ಸೇವಾ ಕೇಂದ್ರ ನಿರ್ಮಾಣದಲ್ಲಿ ಅಕ್ರಮ ನಡೆದಿದೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದಂತೆ ಚೆಳ್ಳೂರು ಗ್ರಾಮಸ್ಥರಾದ ದೇವರೆಡ್ಡಿ ಮೇಟಿ ಹಾಗೂ ತಿಪ್ಪಣ್ಣ ಮಡಿವಾಳರ ದೂರು ಸಲ್ಲಿಕೆ ಮಾಡಿದ್ದರು. ಬಳಿಕ ತನಿಖೆ ನಡೆಸಿ ತಾಪಂ ಕಚೇರಿ ಜಿಪಂಗೆ ವರದಿ ಸಲ್ಲಿಸಿತ್ತು. ಕೊಪ್ಪಳ ಜಿಪಂ ನಿಂದ ಕಲಬುರಗಿ ಆಯುಕ್ತರ ಕಚೇರಿಗೂ ಪತ್ರ ವ್ಯವಹಾರ ನಡೆಸಿತ್ತು. ಇದಲ್ಲದೇ, ಕಲಬುರಗಿ ಆಯುಕ್ತರ ಕಚೇರಿಯಿಂದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಕಚೇರಿಗೂ ಪತ್ರ ವ್ಯವಹಾರಗಳು ನಡೆದಿವೆ. ಈ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ 2024 ಆಗಸ್ಟ್ 22 ರಂದು ತನಿಖೆ ನಡೆಸದೆ ನೋಟಿಸ್ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು.
ತಾಪಂ ಇಒ ಕಾರಟಗಿ ಲಕ್ಷ್ಮೀದೇವಿಜಿಪಂ ನಿಂದ ಪಿಡಿಒ ಅವರಿಗೆ ಮಾಹಿತಿ ನೀಡಲು ತಿಳಿಸಿದ್ದರು. ಈ ಸಂಬಂದ ಜಿಪಂ ಕಚೇರಿಯಿಂದ ಬಂದ ಪ್ರತಿಯನ್ನು ಪಿಡಿಒ ಅವರ ಗಮನಕ್ಕೆ ತರಲಾಗಿದೆ. ದೂರುದಾರರಿಗೆ ನೀಡುವಂತೆ ಅವರು ಸೂಚಿಸಿಲ್ಲ. ಅದಲ್ಲದೇ, ಪಿಡಿಒ ಅವರ ಸೇವಾ ವಿಚಾರ ಆಗಿರುವುದರಿಂದ ನಾನು ನೀಡಲು ಬರುವುದಿಲ್ಲ. ದೂರುದಾರರಿಗೆ ಬೇಕಿದ್ದರೆ ಜಿಪಂ ನಿಂದ ಮಾಹಿತಿ ಪಡೆಯಬಹುದು.