ಕಾರಟಗಿಯಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟ ತಾಲೂಕು ಸಮಿತಿ ಪದಾಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ತಾಲೂಕು ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಬಾಕಿ ವೇತನಕ್ಕೆ ಕಾರ್ಯಕರ್ತೆಯರ ಒತ್ತಾಯ

Koppal

ಕಾರಟಗಿ: ಬಾಕಿ ವೇತನ ಬಿಡುಗಡೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟ ತಾಲೂಕು ಸಮಿತಿ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ತಾಲೂಕು ಸಮಿತಿ ಪದಾಧಿಕಾರಿಗಳು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಕರೊನಾದಿಂದ ಶಾಲೆಗಳು ಮುಚ್ಚಿರುವ ಕಾರಣ 6 ತಿಂಗಳಿಂದ ಗೌರವ ಧನ ನೀಡಿಲ್ಲ. ಈ ಕಾರಣದಿಂದಾಗಿ ಕುಟುಂಬ ನಿರ್ವಹಣೆ ಸಮಸ್ಯೆಯಾಗಿದೆ. ಹೋರಾಟ ಹಮ್ಮಿಕೊಂಡ ಕಾರಣ ಸರ್ಕಾರ ಮೂರು ತಿಂಗಳ ಗೌರವಧನ ಬಿಡುಗಡೆ ಮಾಡಿದೆ. ಜಿಲ್ಲಾಡಳಿತ ಹಾಗೂ ಬಿಸಿಯೂಟ ಯೋಜನೆ ಅಧಿಕಾರಿಗಳು ಬಿಸಿಯೂಟ ತಯಾರಿಕರಿಗೆ ಈವರೆಗೆ ವೇತನ ಪಾವತಿಸಿಲ್ಲ. ಶೀಘ್ರವೇ ವೇತನ ಪಾವತಿಸಬೇಕು. ಎಲ್ ಕೆಜಿ ಮತ್ತು ಯುಕೆಜಿ ಅಂಗನವಾಡಿ ಕೇಂದ್ರಗಳಲ್ಲಿ ಆರಂಭಿಸುವ ಜತೆಗೆ ಐಸಿಡಿಎಸ್ ಉಳಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಬೇಕು ಎಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ಗೀತಾ, ನಾಗರತ್ನ, ಮಹಾದೇವಿ, ಅನಿತಾ, ಶೋಭಾ, ಪ್ರೇಮಾ, ಸುನಂದಮ್ಮ, ಶರಣಮ್ಮ ಮೈಲಾಪುರ, ರತ್ನಮ್ಮ ಚಿರ್ಚನಗುಡ್ಡ, ಲಲಿತ ಮೈಲಾಪುರ, ಲಕ್ಷ್ಮೀದೇವಿ, ಪ್ರಭಾವತಿ ಇದ್ದರು.