ಜಾತಿಗಣಿತಿ ಸಮೀಕ್ಷೆಯಲ್ಲಿ ಬೇಡ ಜಂಗಮ ಸಮುದಾಯದವರನ್ನು ಪರಿಶಿಷ್ಟ ಜಾತಿಯ ಉಪಜಾತಿ ಪಟ್ಟಿಯಲ್ಲಿ ನಮೂದಿಸುವಂತೆ ಒತ್ತಾಯಿಸಿ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ತಹಸಸೀಲ್ದಾರ್ ಅಶೋಕ ಶಿಗ್ಗಾವಿಗೆ ಮನವಿ ಸಲ್ಲಿಸಿದರು. ಚಳಗೇರಿಯ ಶ್ರೀ ವೀರ ಸಂಗಮೇಶ್ವರ ಶಿವಾಚಾರ್ಯರು, ಜಂಗಮ ಸಮುದಾಯದ ತಾಲೂಕು ಅಧ್ಯಕ್ಷ ಶಿವಕುಮಾರ್ ಗಂಧದ ಮಠ, ಪ್ರಮುಖರಾದ ಸಿಎಂ ಹಿರೇಮಠ ಎಸ್.ಎಚ್. ಹಿರೇಮಠ, ಈಶ್ವರಯ್ಯ ಬಾಗಲವಾಡ ಮಠ ಇತರರಿದ್ದರು.  
ಜಿಲ್ಲೆ

ಎಸ್ಸಿ ಉಪಜಾತಿ ಎಂದು ನಮೂದಿಸಿ

ಕುರುವತ್ತಿ ಶ್ರೀಕಾಂತಪ್ಪ

ಕುಷ್ಟಗಿ: ಜಾತಿಗಣತಿ ಸಮೀಕ್ಷೆಯಲ್ಲಿ ಬೇಡ ಜಂಗಮ ಸಮುದಾಯದವರನ್ನು ಪರಿಶಿಷ್ಟ ಜಾತಿಯ ಉಪಜಾತಿ ಪಟ್ಟಿಯಲ್ಲಿ ನಮೂದಿಸುವಂತೆ ಒತ್ತಾಯಿಸಿ ವೀರ ಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಚಳಗೇರಿಯ ಶ್ರೀ ವೀರಸಂಗಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ತಹಸೀಲ್ದಾರ್ ಅಶೋಕ ಶಿಗ್ಗಾವಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಜಾತಿ ಗಣತಿ ಸಮೀಕ್ಷೆಯ ಪರಿಶಿಷ್ಟ ಜಾತಿಗಳ ಉಪಜಾತಿ ಪಟ್ಟಿಯಲ್ಲಿ ಬೇಡ ಜಂಗಮ ಸಮುದಾಯಕ್ಕೆ ಪ್ರತ್ಯೇಕ ಕ್ರಮ ಸಂಖ್ಯೆ (019.1)ನೀಡಲಾಗಿದೆ. ಕುಲಕಸುಬು ಧಾರ್ಮಿಕ ಭಿಕ್ಷಾಟನೆ ಎಂದು ನಮೂದಿಸಲಾಗಿದೆ. ಹೀಗಿದ್ದಾಗ್ಯೂ ತಾಲೂಕಿನಲ್ಲಿ ನಡೆಯುತ್ತಿರುವ ಸಮೀಕ್ಷೆಯಲ್ಲಿ ಬೇಡ ಜಂಗಮ ಸಮುದಾಯದವರನ್ನು ಅನಗತ್ಯ ದಾಖಲೆ ಕೇಳಿ ಸಾಮಾನ್ಯ ವರ್ಗದವರೆಂದು ನಮೂದಿಸಲಾಗುತ್ತಿದೆ. ಇದರಿಂದ ಬೇಡ ಜಂಗಮ ಸಮುದಾಯದವರಲ್ಲಿ ಗೊಂದಲ ಉಂಟಾಗುತ್ತಿದೆ.

ಬೇಡ ಜಂಗಮ ಸಮುದಾಯದವರಿಂದ ಯಾವುದೇ ದಾಖಲೆ ಕೇಳದೇ ಪರಿಶಿಷ್ಟ ಜಾತಿಯ ಉಪಜಾತಿ ಪಟ್ಟಿಯಲ್ಲಿ ನಮೂದಿಸುವಂತೆ ಈ ಕೂಡಲೇ ಆದೇಶ ಹೊರಡಿಸುವಂತೆ ತಹಸೀಲ್ದಾರರಿಗೆ ಆಗ್ರಹಿಸಿದರು. ಈಗಾಗಲೇ ನಡೆಸಲಾದ ಸಮೀಕ್ಷೆಯಲ್ಲಿ ಬೇಡ ಜಂಗಮ ಸಮುದಾಯದವರನ್ನು ಸಾಮಾನ್ಯ ವರ್ಗದಲ್ಲಿ ನಮೂದಿಸಲಾಗಿದೆ.

ಅಂತಹ ಕುಟುಂಬಗಳ ಮರು ಸಮೀಕ್ಷೆ ನಡೆಸಿ ಅವರ ಹೆಸರುಗಳನ್ನೂ ಪರಿಶಿಷ್ಟ ಜಾತಿಯ ಉಪಜಾತಿ ಪಟ್ಟಿಯಲ್ಲಿ ನಮೂದಿಸುವಂತೆ ಒತ್ತಾಯಿಸಿದರು. ಜಂಗಮ ಸಮುದಾಯದ ತಾಲೂಕು ಅಧ್ಯಕ್ಷ ಶಿವಕುಮಾರ ಗಂಧದಮಠ, ಪ್ರಮುಖರಾದ ಈಶ್ವರಯ್ಯ ಬಾಗಲವಾಡಮಠ, ಅಮರಯ್ಯ ಅರಳಲೇಮಠ, ಎಸ್.ಎಚ್. ಹಿರೇಮಠ, ಸಿ.ಎಂ. ಹಿರೇಮಠ ಇತರರು ಇದ್ದರು.