ಆಪರೇಷನ್ ಸಿಂಧೂರ ಯಶಸ್ಸಿನ ಹಿನ್ನೆಲೆಯಲ್ಲಿ ಕಾರಟಗಿಯಲ್ಲಿ ಬಿಜೆಪಿ ತಾಲೂಕು ಘಟಕದ ಪದಾಧಿಕಾರಿಗಳು ವಿಜಯೋತ್ಸವ ಆಚರಿಸಿದರು. ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೌನೇಶ್ ಧಡೇಸುಗೂರು, ಪದಾಧಿಕಾರಿಗಳಾದ ಶರಣಪ್ಪ ದೇವರಮನಿ, ಆನಂದ್ ಕಾರಟಗಿ, ಧನಂಜಯ, ರಾಘವೇಂದ್ರ ಕುಲಕರ್ಣಿ ಇದ್ದರು.  
ಜಿಲ್ಲೆ

ಉಗ್ರರ ದಮನಕ್ಕೆ ಬಿಜೆಪಿ ಹರ್ಷ

ಕುರುವತ್ತಿ ಶ್ರೀಕಾಂತಪ್ಪ

ಕಾರಟಗಿ: ಆಪರೇಷನ್ ಸಿಂಧೂರ ಯಶಸ್ಸಿನ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬುಧವಾರ ಸಂಜೆ ಬಿಜೆಪಿ ತಾಲೂಕು ಘಟಕದ ಪದಾಧಿಕಾರಿಗಳು ವಿಜಯೋತ್ಸವ ಆಚರಿಸಿದರು.

ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಮಾತನಾಡಿ, ಭಯೋತ್ಪಾದನೆ ಮಟ್ಟಹಾಕಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮವಹಿಸಿದೆ. ಇತ್ತೀಚೆಗೆ ಪಹಲ್ಗಾಮ್‌ನಲ್ಲಿನ ಭಾರತೀಯರ ಹತ್ಯೆಗೆ ಭಾರತೀಯ ಸೇನೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ. 9 ಉಗ್ರ ನೆಲೆಗಳನ್ನು ಧ್ವಂಸಗೊಳಿಸಿ ಉಗ್ರರ ಹುಟ್ಟಡಗಿಸಿದೆ. ಪಾಕ್ ತನ್ನ ಹಳೇಯ ಚಾಳಿ ಬಿಟ್ಟು ಬದಲಾಗದಿದ್ದರೆ ಉಳಿಗಾಲವಿಲ್ಲ ಎಂದರು.

ಭಾರತೀಯ ಸೇನೆ ತೋರಿರುವ ಕೆಚ್ಚೆದೆಯ ಹೋರಾಟ ಮೆಚ್ಚುವಂತಹದ್ದು ಎಂದರು. ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೌನೇಶ್ ಧಡೇಸುಗೂರು, ಪದಾಧಿಕಾರಿಗಳಾದ ಶರಣಪ್ಪ ದೇವರಮನಿ, ಆನಂದ್ ಕಾರಟಗಿ, ಧನಂಜಯ, ರಾಘವೇಂದ್ರ ಕುಲಕರ್ಣಿ, ಸೋಮನಾಥ್ ಉಡಮಕಲ್ಲ, ಆನಂದ್ ಕುಲಕರ್ಣಿ, ಶಶಿ ಮ್ಯಾದರ್, ರಾಯಪ್ಪ ವಾಲ್ಮೀಕಿ ಇತರರಿದ್ದರು.