ಕಾರಟಗಿ ತಾಲೂಕಿನ ಬೆನ್ನೂರು ತಾಂಡಾದ ರಸ್ತೆ ಮಳೆಯಿಂದ ಕೆಸರು ಮಯವಾಗಿರುವುದು.  
ಜಿಲ್ಲೆ

ಮಳೆಗಾಲದಲ್ಲಿ ಬೆನ್ನೂರು ತಾಂಡಾ ರಸ್ತೆ ಕೆಸರು ಗದ್ದೆ

ಕುರುವತ್ತಿ ಶ್ರೀಕಾಂತಪ್ಪ

ಕಾರಟಗಿ: ತಾಲೂಕಿನ ಬೆನ್ನೂರು ತಾಂಡಾದ ರಸ್ತೆ ಮಳೆ ಬಂದರೆ ಕೆಸರು ಗದ್ದೆಯಂತಾಗಲಿದ್ದು, ದುರಸ್ತಿ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಂಡಾ ನಿವಾಸಿಗಳು ಕೆಲಸ ಕಾರ್ಯಗಳಿಗೆ ಇತರ ಗ್ರಾಮಗಳಿಗೆ ಸಂಚರಿಸಲು ಪರದಾಡುವ ಸ್ಥಿತಿ ಉಂಟಾಗಿದೆ. ಪ್ರಸ್ತುತ ಮಳೆಗಾಲ ಆರಂಭವಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುತ್ತಿದೆ. ರಸ್ತೆ ಹದಗೆಟ್ಟ ಕಾರಣ ಸಣ್ಣ ಪುಟ್ಟ ಅಪಘಾತಗಳು ಸಾಮಾನ್ಯವಾಗಿವೆ.

ಪ್ರತಿ ಬಾರಿ ಮಳೆಗಾಲದಲ್ಲಿ ಈ ಸಮಸ್ಯೆ ಕಾಡುತ್ತಿದೆ. ಸಂಬಂಧಿಸಿದ ಇಲಾಖೆ ಶೀಘ್ರ ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಸೆಯಾಗಿದೆ.