ಕಾರಟಗಿ: ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಪ್ರತಿಷ್ಠಿತ ಧಾರವಾಡ ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಡಿ.ಬಿ.ಕರಡೋಣಿ ಅವರನ್ನು ಕಸಾಪ ತಾಲೂಕು ಘಟಕ ಸೋಮವಾರ ಬೀಳ್ಕೊಟ್ಟಿತ್ತು.
ಡಾ.ಡಿ.ಬಿ.ಕರಡೋಣಿ ಮಾತನಾಡಿ, ಸಾಹಿತ್ಯಕ್ಕೆ ನೀಡಿದ ಅಲ್ಪ ಕೊಡುಗೆಯನ್ನು ಪರಿಗಣಿಸಿ ದ್ವಿತೀಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡುವುದಲ್ಲದೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದೀರಿ. ಮಗುವನ್ನು ತೊಟ್ಟಿಲಲ್ಲಿ ತೂಗುವಂತೆ ತೂಗುವ ಮೂಲಕ ಪ್ರೀತಿ, ಅಕ್ಕರೆಯಿಂದ ಕಂಡ ಪಟ್ಟಣ ಹಾಗೂ ತಾಲೂಕಿನ ಎಲ್ಲ ಜನತೆಗೆ, ಕಸಾಪಕ್ಕೆ ಸದಾ ಋಣಿಯಾಗಿದ್ದೇನೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಶರಣಪ್ಪ ಕೋಟ್ಯಾಳ ಮಾತನಾಡಿ, ಡಾ.ಡಿ.ಬಿ.ಕರಡೋಣಿಯವರು ಕಸಾಪದಿಂದ ನಡೆಯುವ ಸಾಹಿತ್ಯ ಚಟುವಟಿಕೆಗಳಲ್ಲಿ ನಿರಂತರ ಪಾಲ್ಗೊಂಡು ಉತ್ಸಾಹ ತುಂಬಬೇಕು. ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಈಡೇರಿಸಲು ಆಗಾಗ್ಗೆ ಪ್ರಭುತ್ವದ ಮೇಲೆ ಒತ್ತಡವನ್ನು ಹೇರಬೇಕು ಎಂದು ಕೋರಿದರು. ಉಪನ್ಯಾಸಕ ಡಾ.ಹನುಮಂತಪ್ಪ ಚಂದಲಾಪುರ, ಶಿಕ್ಷಕ ಬಸವರಾಜ ರ‌್ಯಾವಳದ, ಪ್ರಮುಖರಾದ ರವಿಸ್ವಾಮಿ ಹಿರೇಮಠ, ಹನುಮಂತಪ್ಪ ತೊಂಡಿಹಾಳ, ಅಮರೇಶಗೌಡ, ರಾಘವೇಂದ್ರ ಶ್ರೇಷ್ಠಿ ಇತರರಿದ್ದರು.