ಕಾರಟಗಿಯ ಕೆಪಿಎಸ್ ಆವರಣದಲ್ಲಿ ವಿದ್ಯಾ ವಿನಾಯಕ ಸಂಘದಿಂದ ಗಣೇಶೋತ್ಸವದ ಅಂಗವಾಗಿ 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬುಧವಾರ ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ, ಸದಸ್ಯರಾದ ಸೋಮಶೇಖರ ಭೇರ್ಗಿ, ಬಸವರಾಜ ಕೊಪ್ಪದ್ ಇತರರಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಅಗತ್ಯ

ಪ್ರವೀಣ ಉದುಸಾ ದಲಬಂಜನ್

ಕಾರಟಗಿ: ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಪ್ರತಿಭೆ ಹೊರಬರಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು ಅಭಿಪ್ರಾಯಪಟ್ಟರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾ ವಿನಾಯಕ ಸಂಘದಿಂದ ಗಣೇಶೋತ್ಸವದ ಅಂಗವಾಗಿ 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬುಧವಾರ ಸನ್ಮಾನಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವುದರಿಂದ ಇತರರಿಗೆ ಪ್ರೇರಣೆಯಾಗಲಿದೆ. ಅವರಲ್ಲಿ ಪಠ್ಯ ಮತ್ತು ಪಠ್ಯೇತರ ಅನೇಕ ಪ್ರತಿಭೆಗಳು ಸುಪ್ತವಾಗಿ ಅಡಗಿರುತ್ತವೆ. ಗುರುತಿಸುವಿಕೆಯಿಂದ ಹೊರ ಜಗತ್ತಿಗೆ ತೆರೆದುಕೊಳ್ಳಲಿದ್ದಾರೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಕರ್ತವ್ಯ ಎಂದು ತಿಳಿಸಿದರು.

ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ರಾಧಿಕಾ, ಕೆ.ಲಾವಣ್ಯ, ಗಿರೀಶ, ಅಭಿಷೇಕ, ಭೀಮಬಾಯಿ, ಸಂಜನಾರನ್ನು ಸನ್ಮಾನಿಸಲಾಯಿತು. ವಿದ್ಯಾ ವಿನಾಯಕ ಸಂಘದಿಂದ ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು, ಕೆಪಿಎಸ್ ಪ್ರಾಚಾಯರ್ಯ ಅನಿಲ್‌ಕುಮಾರ ಹಾಗೂ ಪೊಲೀಸ್ ಸಿಬ್ಬಂದಿ ಸನ್ಮಾನಿಸಲಾಯಿತು.

ವಿನಾಯಕ ಸಂಘದ ಪದಾಧಿಕಾರಿಗಳಾದ ಸಿದ್ದರಾಮಯ್ಯಸ್ವಾಮಿ ಹಿರೇಮಠ, ಸಿದ್ದು ರಬ್ಬನಗೌಡ್ರು, ಸುರೇಶ ದರೋಜಿ, ಆನಂದ, ಮಲ್ಲಪ್ಪ ಮೇಟಿ, ತಿಪ್ಪಣ್ಣ ಶೆಟ್ಟರ್, ಮಹೇಶ ರೇವಣಕರ್, ಬಸವರಾಜ ಎತ್ತಿನಮನಿ, ಯಂಕೋಬ ನಾಯಕ, ಅಕ್ಕಲ್ ರಾಮ್, ರಘುನಾಥರೆಡ್ಡಿ, ಬಸವರಾಜ ಶಿವಶಕ್ತಿ, ಮಂಜುನಾಥ ಅಳವಂಡಿ, ಆನಂದ ತಾವರಗೇರಾ, ಅಮರೇಶ ಪಾಟೀಲ್, ಶಿವಕುಮಾರ ಕುಳಗಿ, ಮಂಜುನಾಥ ಗುಂಜಳ್ಳಿ ಇತರರಿದ್ದರು.