ಕಾರಟಗಿ: ಸಂವಿಧನಾ ಸಮರ್ಪಣಾ ದಿನದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಕಾರಟಗಿ, ಕನಕಗಿರಿ ಹಾಗೂ ಗಂಗಾವತಿ ತಾಲೂಕು ಘಟಕಗಳ ನೇತೃತ್ವದಲ್ಲಿ ನ.2ರಂದು ಪಟ್ಟಣದ ಪೊಲೀಸ್ ಠಾಣೆ ಎದುರಿನ ಜಾಗದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದೆಂದು ಸಮಿತಿಯ ಜಿಲ್ಲಾಧ್ಯಕ್ಷ ಸಿ.ಕೆ.ಮರಿಸ್ವಾಮಿ ಬರಗೂರು ತಿಳಿಸಿದರು.
ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ದೇಶದ ಪ್ರತಿ ಪ್ರಜೆಯೂ ಘನತೆಯಿಂದ ಬದುಕುವ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ. ಸಮಾನತೆ ಅಲ್ಲದೆ ಎಲ್ಲ ಅಂಶಗಳನ್ನೊಳಗೊಂಡ ಸಂವಿಧಾನವನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿ ದೇಶಕ್ಕೆ ಸಮರ್ಪಿಸಿದ್ದಾರೆ. ಹೀಗಾಗಿ ಪ್ರಗತಿಪರರು, ಸಮಾನತೆ ಬಯಸುವ ಎಲ್ಲರೂ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು. ಸಂವಿಧಾನದ ಆಶಯ ಕುರಿತು ಎಲ್ಲರಲ್ಲೂ ತಿಳಿವಳಿಕೆ ಮೂಡಿಸುವುದು ಸಮಾವೇಶದ ಉದ್ದೇಶವಾಗಿದೆ. ಜಾತಿ, ಧರ್ಮ, ಮತ-ಭೇದ ಮಾಡದೇ ಎಲ್ಲರೂ ಸಂವಿಧಾನದಡಿ ಬದುಕುತ್ತಿದ್ದೇವೆ. ಸಮರ್ಪಣಾ ದಿನದ ಸಮಾವೇಶವದಲ್ಲಿ ಮೂರು ತಾಲೂಕುಗಳ ಸರ್ವ ಸಮುದಾಯದವರೂ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಪ್ರಮುಖರಾದ ಶಂಕರ್ ಗಾಂಧಿನಗರ, ಮಾರುತಿ ಹುಳ್ಕಿಹಾಳ, ಭೀಮೇಶ ಹುಳ್ಕಿಹಾಳ, ಬಸವರಾಜ ಕಾರಟಗಿ, ಬಸವರಾಜ ಬರಗೂರು, ಮರಿಯಪ್ಪ ಕಟಿಗಿಹಾಳ, ಶಾವಂತ್ರಪ್ಪ ಬರಗೂರು, ಓಂಕಾರಪ್ಪ ಈಳಿಗನೂರು, ಸುರೇಶ ಗಾಂಧಿನಗರ ಇತರರಿದ್ದರು.