ಜಿಲ್ಲೆ

ಕರಾಸ್ತ್ರ ಸಿನಿಮಾ 13ಕ್ಕೆ ತೆರೆಗೆ

ಹುಬ್ಬಳ್ಳಿ : ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ, ಬ್ಯಾಡಗಿ, ಗದಗ, ಹಾವೇರಿ ಸುತ್ತ ಚಿತ್ರೀಕರಿಸಿರುವ ಹಾಗೂ ಈ ಭಾಗದ ಕಲಾವಿದರನ್ನು ಒಳಗೊಂಡು ನಿರ್ವಿುಸಿರುವ ಶ್ರೀ ಶಿವಶಕ್ತಿ ಸಿನಿ ಕಂಬೈನ್ಸ್​ನ ಕನ್ನಡ ಚಲನಚಿತ್ರ ಕರಾಸ್ತ್ರ ಜೂ. 13ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಿರ್ದೇಶಕ, ನಟ ನಾರಾಯಣ ಪೂಜಾರ ಚಿತ್ರದಲ್ಲಿ ಕರಾಟೆ ಪಟುಗಳು ಮತ್ತು ನಾಲ್ವರು ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ ಎಂದರು.

ದ್ವಾಪರ ಯುಗದಲ್ಲಿ ನಡೆದ ಘಟನೆಯ ಕಥಾವಸ್ತು ಚಿತ್ರದಲ್ಲಿ ಇದೆ. ಮಹಿಳೆಯೊಬ್ಬಳು ಇಚ್ಛಿಸಿದರೆ ಯಾವುದೇ ಸಾಧನೆಯನ್ನು ಮಾಡಬಲ್ಲಳು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಹೇಳಿದರು.

ಸಹಾಯಕ ನಿರ್ದೇಶಕರಾಗಿ ಪವನ ಕುಲಕರ್ಣಿ, ಸತೀಶ ಕ್ಯಾತಘಟ್ಟ, ಕಣಿವೆಪ್ಪ ಬಿ. ಅತ್ಯುತ್ತಮ ಕೆಲಸ ನಿರ್ವಹಿಸಿದ್ದಾರೆ. ಕಥೆ, ಚಿತ್ರಕಥೆೆ, ಸಾಹಿತ್ಯ ಮತ್ತು ನಿಮಾಣದ ಜವಾಬ್ದಾರಿಯನ್ನು ನಾನೇ ನಿರ್ವಹಿಸಿದ್ದೇನೆ ಎಂದು ತಿಳಿಸಿದರು.

ಮುಖ್ಯ ಪಾತ್ರವರ್ಗದಲ್ಲಿ ಶ್ರೀನಿವಾಸ ಹುಲೋಟಿ, ಕೃತಿ ವೀರಣ್ಯ, ಮನಿಶಾ ಕಲ್ಕೂರ, ಬೇಬಿ ಕೃಷ್ಣವೇಣಿ, ಬೇಬಿ ಸಾಕ್ಷಿ, ಕಾರ್ತಿಕ ಪೂಜಾರ, ಹನುಮಂತ, ಮಾಲತೇಶ ಸುಂಕದ, ಅಬ್ದುಲ್ ಮುನ್ನಾ ಎರೆಸೀಮೆ, ಬಸವರಾಜ ಹೊಂಬಾಳಿ ಹಾಗೂ ಇನ್ನಿತರರು ಅಭಿನಯಿಸಿದ್ದಾರೆ ಎಂದರು.

ಡಾ. ಪ್ರಭು ಗಂಜಿಹಾಳ, ಮನಿಶಾ ಕಬ್ಬೂರ, ವಿನೋದ ಬಾಂಡಗೆ ಸುದ್ದಿಗೋಷ್ಠಿಯಲ್ಲಿ ಇದ್ದರು.