ಜಿಲ್ಲೆ

ಅಧ್ಯಕ್ಷ ಸ್ಥಾನದಿಂದ ಮಹೇಶ ಜೋಶಿ ಅಮಾನತಾಗಲಿ: ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಆಗ್ರಹ

ಕೆ.ಎನ್.ರಾಘವೇಂದ್ರ

ಮಂಡ್ಯ: ನಗರದಲ್ಲಿ ನಡೆದ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ 2.50 ಕೋಟಿ ರೂ ಲೆಕ್ಕ ನೀಡದೆ, ಉದ್ಧಟತನ ಮೆರೆಯುತ್ತಿರುವ ಡಾ.ಮಹೇಶ ಜೋಶಿ ಅವರನ್ನು ಕಸಾಪ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಬೇಕು ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಆಗ್ರಹಿಸಿದರು.

ಪ್ರೊ.ಎಚ್.ಎಸ್.ಮುದ್ದೇಗೌಡ ಅವರು ಮಹೇಶ ಜೋಶಿ ಅವರ ಬೆಂಬಲಿಗರಂತೆ ಸಮರ್ಥಿಸಿಕೊಳ್ಳುತ್ತಿದ್ದಾರೆ. ಜೋಶಿ ಅವರು ಸಮ್ಮೇಳನ ಮುಗಿದ ಮರುದಿನವೇ ಜಿಲ್ಲಾ ಸಮಿತಿ ವಜಾ ಮಾಡಿದ್ದೇಕೆ?. ಮೀರಾ ಶಿವಲಿಂಗಯ್ಯ ಅವರನ್ನು ಹೊರಹಾಕಿದ್ದನ್ನು ಪ್ರಶ್ನಿಸಲು ಬಂದವರ ವಿರುದ್ಧ ದೂರು ನೀಡಿದ್ದು ಏಕೆ?. ಬೈಲಾ ತಿದ್ದುಪಡಿ ಮೂಲಕ ಜಿಲ್ಲಾಧ್ಯಕ್ಷರ ಅಧಿಕಾರ ಕೇಂದ್ರೀಕರಣಗೊಳಿಸುತ್ತಿರುವುದು ಏಕೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಮಂಜು, ಸುಂಡಹಳ್ಳಿ ಮಹೇಶ್, ಉಮಾಕಾಂತ್, ಕುಮಾರ್, ಅಭಿನಂದನ್ ಇದ್ದರು.