ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಮೇಕ್ ಸಮ್ ವನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ಸಹಯೋಗದೊಂದಿಗೆ ಕರಂದಾಡಿ ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೈಗೆತ್ತಿಕೊಳ್ಳಲಾಗಿದ್ದ 4.50 ಲಕ್ಷ ರೂ. ವೆಚ್ಚದ ನವೀಕರಣ ಕಾಮಗಾರಿಗಳನ್ನು ಉದ್ಘಾಟಿಸಿ ಹಸ್ತಾಂತರಿಸಲಾಯಿತು.
ಕರಂದಾಡಿ ಶಾಲೆ ಶಿಕ್ಷಕ-ರಕ್ಷಕ ಸಂಘದ ರವಿರಾಜ್ ಶೆಟ್ಟಿ ಪಂಜಿತ್ತೂರುಗುತ್ತು ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ್ ಹೆಗಡೆ, ಕಾಪು ಎಸ್‌ಐ ಅಬ್ದುಲ್ ಖಾದರ್, ಚಲನಚಿತ್ರ ನಟ ರೂಪೇಶ್ ಶೆಟ್ಟಿ ಶುಭಾಂಶಸನೆಗೈದರು.
ಮೇಕ್ ಸಮ್ ವನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡದ ಸದಸ್ಯ ಗುರುಪ್ರಸಾದ್ ಶೆಟ್ಟಿ ಬೈಲೂರು, ತಮ್ಮ ತಂಡವು ಕಳೆದ ಏಳು ವರ್ಷಗಳಲ್ಲಿ ನಡೆಸಿದ ಕಾರ್ಯಕ್ರಮಗಳು, ಸಾರ್ವಜನಿಕ ಸಹಕಾರದ ಕುರಿತಾಗಿ ಮಾಹಿತಿ ನೀಡಿದರು. ಕಾಪು ಲಯನ್ಸ್ ಕ್ಲಬ್ ವತಿಯಿಂದ ಶಾಲೆಗೆ ಬೆಂಚ್ ಮತ್ತು ಡೆಸ್ಕ್‌ಗಳಿಗಾಗಿ ಲಯನ್ಸ್ ರೀಜನಲ್ ಚೇರ್‌ಮನ್ ವರುಣ್ ಶೆಟ್ಟಿ, ಅಧ್ಯಕ್ಷ ಉದಯ್ ಶೆಟ್ಟಿ, ಕಾರ್ಯದರ್ಶಿ ಲುತ್ಪುಲ್ಲಾ ಸಾಹೇಬ್ ನೇತೃತ್ವದಲ್ಲಿ ದೇಣಿಗೆಯನ್ನು ಹಸ್ತಾಂತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಪದ್ಮನಾಭ ಶ್ಯಾನುಭಾಗ್, ಮಜೂರು ಗ್ರಾಪಂ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು, ಪುಸ್ತಕದ ದಾನಿ ಮಿಥುನ್ ರೈ, ಶಾಲಾ ಹಳೇ ವಿದ್ಯಾರ್ಥಿ ರಾಮದಾಸ್ ತಂತ್ರಿ, ಕಲ್ಪವೃಕ್ಷ ಕನ್ನಡ ಶಾಲೆ ತಂಡದ ಅಧ್ಯಕ್ಷ ಶ್ರೀಧರ ಶೆಟ್ಟಿಗಾರ್ ಕರಂದಾಡಿ, ಆಡಳಿತ ಸಮಿತಿ ಸದಸ್ಯ ಶಶಿಶೇಖರ ಭಟ್, ನಾಗಭೂಷಣ್ ರಾವ್, ಮುಖ್ಯ ಶಿಕ್ಷಕ ಆರ್.ಎಸ್.ಕಲ್ಲೂರ, ನಿವೃತ್ತ ಮುಖ್ಯ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ, ರಂಗನಟರಾದ ಪ್ರಸನ್ನ ಶೆಟ್ಟಿ ಬೈಲೂರು, ಶರತ್ ಉಚ್ಚಿಲ, ಸಂದೀಪ್ ಶೆಟ್ಟಿ, ಮರ್ವಿನ್ ಶಿರ್ವ ಮತ್ತಿತರರು ಉಪಸ್ಥಿತರಿದ್ದರು.