ಮಂಗಳೂರು: ಕರಂಬಾರು ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿ ಹಾಗೂ ಪಾಲಕರ ಸಹಕಾರದೊಂದಿಗೆ ‘ಆಟಿಡೊಂಜಿ ದಿನ’ ಇತ್ತೀಚೆಗೆ ನಡೆಯಿತು.
ಕೃಷ್ಣ ಕಲ್ಲೋಡಿ ಕಾರ್ಯಕ್ರಮ ಉದ್ಘಾಟಿಸಿದರು. ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಸತೀಶ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ತುಳು ಲಿಪಿ ಶಿಕ್ಷಕಿ, ಸಾಹಿತಿ ಗೀತಾ ಲಕ್ಷ್ಮೀಶ್ ಮಾಹಿತಿ ನೀಡಿದರು. ಸಿಂಜಿನ್ ಇಂಡಿಯಾ ಜನರಲ್ ಮ್ಯಾನೇಜರ್ ರೊನಾಲ್ಡ್ ಮಸ್ಕರೇನಸ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ಮಾಧವ ಅಮೀನ್, ಬ್ಯಾರಿ ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಸದಸ್ಯ ಸಂಶೀರ್ ಬುಡೋಳಿ, ಶ್ರೀ ಕೋಟೆ ಬಬ್ಬುಸ್ವಾಮಿ ದೇವಸ್ಥಾನದ ಅಧ್ಯಕ್ಷ ಜಗನ್ನಾಥ ಸಾಲ್ಯಾನ್, ಯುವ ಉದ್ಯಮಿ ನಂದಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಸಾಂಸ್ಕೃತಿಕ ಕಾರ್ಯದರ್ಶಿಗಳಾದ ನವೀನ್‌ಚಂದ್ರ ಸಾಲ್ಯಾನ್ ಮತ್ತು ಲೋಕೇಶ್ ಎಂ.ಬಿ ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕಿ ಉಷಾಕಿರಣ ಸ್ವಾಗತಿಸಿದರು. ಹಳೇ ವಿದ್ಯಾರ್ಥಿ ಸಂಘ ಉಪಾಧ್ಯಕ್ಷ ರಾಕೇಶ್ ಕುಂದರ್ ವಂದಿಸಿದರು. ಪುರುಷೋತ್ತಮ್ ಗೋಳಿಪಲ್ಕೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆಟಿ ತಿಂಗಳಲ್ಲಿ ಮಾಡುವ ವಿಶೇಷ ತಿನಿಸುಗಳ ಸಹಭೋಜನ ನಡೆಯಿತು. ನವಶಕ್ತಿ ಶಾರದೋತ್ಸವ ಸ್ವಾಗತ ಸಮಿತಿ ಮರವೂರು ವತಿಯಿಂದ ಶಾಲಾ ನೂತನ ಕಟ್ಟಡದ ದೇಣಿಗೆಯಾಗಿ 1,65,000 ರೂ. ಚೆಕ್ ಹಸ್ತಾಂತರಿಸಲಾಯಿತು.